ದರ್ಶನ್ ಅಭಿನಯದ ಬಹುನಿರೀಕ್ಷಿತ ‘ಡೆವಿಲ್’ ಸಿನಿಮಾದ ಟ್ರೇಲರ್ ಡಿಸೆಂಬರ್ 5ರಂದು ಬೆಳಿಗ್ಗೆ 10.05ಕ್ಕೆ ಬಿಡುಗಡೆಯಾಗುವುದಾಗಿ ಸಿನಿಮಾತಂಡ ಘೋಷಿಸಿದೆ.
ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿ ಇರುವ ಕಾರಣ ಸಿನಿಮಾದ ಪ್ರಚಾರವನ್ನು ಸಂಪೂರ್ಣವಾಗಿ ಅಭಿಮಾನಿಗಳೇ ವಹಿಸಲು ಮುಂದಾಗಿದ್ದಾರೆ.
ಚಿತ್ರದ ಟ್ರೇಲರ್ ಬಿಡುಗಡೆಯ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದ್ದು, ಫ್ಯಾನ್ಸ್ ಗೆ ಕಾತುರ ಹುಟ್ಟಿಸಿದೆ. ‘ಸರಿಗಮ’ ಯೂಟ್ಯೂಬ್ ಚಾನೆಲ್ನಲ್ಲಿ ಟ್ರೇಲರ್ ಲೈವ್ ಆಗಲಿದ್ದು ಅಭಿಮಾನಿಗಳು ಟ್ರೇಲರ್ ಗೆ ಭರ್ಜರಿ ಸ್ವಾಗತ ನೀಡಲು ಸಿದ್ಧರಾಗಿದ್ದಾರೆ.
ದರ್ಶನ್ ಅವರು ಕೊಲೆ ಪ್ರಕರಣದಲ್ಲಿ ಬಂಧಿತರಾದರೂ ಅದಕ್ಕೂ ಮುನ್ನ ‘ಡೆವಿಲ್’ ಚಿತ್ರದ ಮಹತ್ತರ ಭಾಗದ ಚಿತ್ರೀಕರಣ ಪೂರ್ಣಗೊಂಡಿತ್ತು. ಜಾಮೀನುನಲ್ಲಿ ಬಿಡುಗಡೆಗೊಂಡಿದ್ದ ಅವರು ಚಿತ್ರದ ಉಳಿದ ಚಿತ್ರೀಕರಣ, ಡಬ್ಬಿಂಗ್ ಕೆಲಸ ಮುಗಿಸಿದ್ದರು. ಈಗ ಅವರು ಜೈಲಿನಲ್ಲಿ ಇರುವಂತೆಯೇ ಚಿತ್ರ ಬಿಡುಗಡೆಯಾಗುತ್ತಿದೆ.
ವಿಜಯಲಕ್ಷ್ಮೀ ಅವರು ಇತ್ತೀಚೆಗೆ ದರ್ಶನ್ ಅಭಿಮಾನಿಗಳ ಸಭೆ ನಡೆಸಿ ಸಿನಿಮಾದ ಪ್ರಚಾರ ಕಾರ್ಯಕ್ಕೆ ವಿಶೇಷ ತಂತ್ರ ರೂಪಿಸಿರುವುದಾಗಿ ತಿಳಿದು ಬಂದಿದೆ. ‘ಡೆವಿಲ್’ ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲು ಸಕಲ ಸಿದ್ಧತೆಗಳು ನಡೆದಿವೆ.
‘ಡೆವಿಲ್’ ಚಿತ್ರಕ್ಕೆ ಮಿಲನ ಪ್ರಕಾಶ್ ನಿರ್ದೇಶನ ಇದೆ. ರಚನಾ ರೈ, ಅಚ್ಯುತ್ ಕುಮಾರ್, ಶೋಭರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ.
—-





Be the first to comment