ಮಿಲನಾ ಪ್ರಕಾಶ್ ನಿರ್ದೇಶನದ ‘ಡೆವಿಲ್‘ ಚಿತ್ರತಂಡ ದಿಢೀರ್ ಎಂದು ಚಿತ್ರದ ಟೈಟಲ್ ಬದಲಾವಣೆ ಮಾಡಿದೆ.
ಕಾಟೇರ ಸಿನಿಮಾದ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಡೆವಿಲ್‘ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದರು. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಜೈಲು ಸೇರಿದ ಬಳಿ ಸುಮಾರು 7 ತಿಂಗಳ ಕಾಲ ಶೂಟಿಂಗ್ ಸ್ಥಗಿತಗೊಳಿಸಲಾಗಿತ್ತು. ಇದೀಗ ದರ್ಶನ್ ಜಾಮೀನಿನ ಮೇಲೆ ಹೊರ ಬಂದಿದ್ದು ಮತ್ತೆ ಶೂಟಿಂಗ್ ಶುರುವಾಗಲಿದೆ. ಈ ಮಧ್ಯೆ ಚಿತ್ರತಂಡ ಚಿತ್ರದ ಟೈಟಲ್ ಬದಲಾವಣೆ ಮಾಡಿದೆ.
ಈ ಮೊದಲು ಚಿತ್ರಕ್ಕೆ ‘ಡೆವಿಲ್‘- ದಿ ಹೀರೊ ಎನ್ನುವ ಟೈಟಲ್ ಇತ್ತು. ಈಗ ಅದನ್ನು ‘ದಿ ಡೆವಿಲ್‘ ಎಂದು ಬದಲಿಸಿರುವುದು ಸದ್ಯ ಬಿಡುಗಡೆ ಮಾಡಿರುವ ಪೋಸ್ಟರ್ ನಲ್ಲಿ ಗೊತ್ತಾಗಿದೆ. ಏಕಾಏಕಿ ಟೈಟಲ್ ಬದಲಾವಣೆಗೆ ಕಾರಣ ಏನು ಎಂಬುದು ಮಾತ್ರ ತಿಳಿದು ಬಂದಿಲ್ಲ.
ದರ್ಶನ್ ಸದ್ಯ ಬೆನ್ನು ನೋವಿನಿಂದ ಬಳಲುತ್ತಿದ್ದು ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮುಂದಿನ ತಿಂಗಳು ‘ಡೆವಿಲ್‘ ಚಿತ್ರೀಕರಣ ಶುರುವಾಗಬಹುದು ಎನ್ನಲಾಗ್ತಿದೆ. ನಾಳೆ ದರ್ಶನ್ ಹುಟ್ಟುಹಬ್ಬವಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅಭಿಮಾನಿಗಳ ಜೊತೆ ಬರ್ತಡೇ ಸೆಲೆಬ್ರೇಷನ್‌ಗೆ ದರ್ಶನ್ ಬ್ರೇಕ್ ಹಾಕಿದ್ದಾರೆ.

Be the first to comment