ದರ್ಶನ್ ಅಭಿನಯಿಸಿದ ಡೆವಿಲ್ ಚಿತ್ರದ ಮೂರನೇ ಹಾಡು ನವೆಂಬರ್ 16ರಂದು ಭಾನುವಾರ ಬೆಳಿಗ್ಗೆ 12:03ಕ್ಕೆ ರಿಲೀಸ್ ಆಗಲಿದೆ.
ಈಗಾಗಲೇ ಮೊದಲನೆಯ ಹಾಡು “ಇದ್ರೆ ನೆಮ್ದಿಯಾಗ್ ಇರ್ಬೇಕ್” ಮತ್ತು ಎರಡನೆಯ “ಒಂದೆ ಒಂದು ಸಲ” ಹಾಡು ಬಿಡುಗಡೆಯಾಗಿದೆ. ನವೆಂಬರ್ 16ರಂದು ಮೂರನೇ ಹಾಡು ರಿಲೀಸ್ ಆಗಲಿದೆ ಎಂದು ಡೈರೆಕ್ಟರ್ ಮಿಲನ ಪ್ರಕಾಶ್ ಅಧಿಕೃತವಾಗಿ ತಿಳಿಸಿದ್ದಾರೆ. ತಮ್ಮ ಶ್ರೀ ಜೈ ಮಾತಾ ಕಂಬೈನ್ಸ್ ಪೇಜ್ ಮೂಲಕ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಡೆವಿಲ್ ಚಿತ್ರದ ಪ್ರಚಾರ ಈಗಾಗಲೇ ಆರಂಭವಾಗಿದೆ. ಚಿತ್ರತಂಡ ಮೊದಲ ಹಂತದ ಶೂಟಿಂಗ್ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿದ್ದು, ದರ್ಶನ್ ಅಭಿನಯಿಸಿದ ಆ್ಯಕ್ಷನ್ ಸೀನ್‌ಗಳು ಇವೆ. ಈ ಆ್ಯಕ್ಷನ್ ಭಾಗವನ್ನು ರಾಮ್ ಲಕ್ಷ್ಮಣ್ ನಿರ್ದೇಶನ ಮಾಡಿದ್ದಾರೆ. ಸುಧಾಕರ್ ಅವರ ಕ್ಯಾಮರಾ ಕೆಲಸದ ಶೈಲಿ ಹೇಗಿದೆ ಎಂಬುದು ಈ ವಿಡಿಯೋ ಮೂಲಕ ಸ್ಪಷ್ಟವಾಗಿದೆ.
ಡೆವಿಲ್ ಸಿನಿಮಾ ದರ್ಶನ್ ಅಭಿಮಾನಿಗಳಿಗೆ ಆ್ಯಕ್ಷನ್ ಮತ್ತು ಮನರಂಜನೆಯ ಅನುಭವ ನೀಡಲಿರುವ ನಿರೀಕ್ಷೆ ಇದೆ. ಡೆವಿಲ್ ಮುಂದಿನ ತಿಂಗಳು ಡಿಸೆಂಬರ್ 12ರಂದು ತೆರೆಕಾಣಲಿದೆ.
—-





Be the first to comment