ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ “ದಿ ಡೆವಿಲ್” ಚಿತ್ರದ ಮಾತಿನ ಭಾಗದ ಶೂಟಿಂಗ್ ಪೂರ್ಣಗೊಂಡಿದೆ.
“ದಿ ಡೆವಿಲ್” ಪೋಸ್ಟರ್, ಟೀಸರ್ನಿಂದಲೇ ಸಖತ್ ಸದ್ದು ಮಾಡುತ್ತಿದೆ. ಶ್ರೀ ಜೈ ಮಾತಾ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಭರ್ಜರಿಯಾಗಿ ತಯಾರಾಗುತ್ತಿರುವ ಚಿತ್ರದಲ್ಲಿ ಅಂಬರೀಶ್ ಅವರ ‘ಅಂತ’ ಚಿತ್ರದ ‘ಕನ್ವರ್‌ಲಾಲ್’ ಲುಕ್‌ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ಗೆ ದರ್ಶನ್ ಫ್ಯಾನ್ಸ್ ಮೆಚ್ಚುಗೆ ಸೂಚಿಸುತ್ತಿದ್ದಾರೆ.
‘ಡೆವಿಲ್’ ಚಿತ್ರವನ್ನು ಬೆಂಗಳೂರು ಮತ್ತು ರಾಜಸ್ಥಾನದಲ್ಲಿ ಚಿತ್ರೀಕರಿಸಲಾಗಿದೆ. ನಿರ್ಣಾಯಕ ಭಾಗಗಳನ್ನು ಚಿತ್ರೀಕರಿಸಲು ಚಿತ್ರತಂಡ ವಿದೇಶಕ್ಕೆ ತೆರಳಲಿದೆ. ಶೀಘ್ರದಲ್ಲೇ ಡಬ್ಬಿಂಗ್ ಪ್ರಾರಂಭಿಸಲಿದೆ.
ಚಿತ್ರದಲ್ಲಿ ದರ್ಶನ್ ಗೆ ರಚನಾ ರೈ ಜೋಡಿಯಾಗಿದ್ದಾರೆ. ಮಹೇಶ್ ಮಂಜ್ರೇಕರ್ ಖಳನಾಯಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತುಳಸಿ, ಅಚ್ಯುತ್ ಕುಮಾರ್, ಶ್ರೀನಿವಾಸ್ ಪ್ರಭು, ಶೋಭ್ ರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಡೆವಿಲ್ ಚಿತ್ರಕ್ಕೆ ಸುಧಾಕರ್ ಎಸ್ ರಾಜ್ ಛಾಯಾಗ್ರಹಣ , ಬಿ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಮತ್ತು ರಾಮ್-ಲಕ್ಷ್ಮಣ್ ಸಾಹಸ ನೃತ್ಯ ನಿರ್ದೇಶನ ಮಾಡಿದ್ದಾರೆ.

Be the first to comment