ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರ ಬಂದಿರುವ ದರ್ಶನ್ ಫೆಬ್ರವರಿಯಲ್ಲಿ “ಡೆವಿಲ್” ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.
ದರ್ಶನ್ ಗೆ ಸಂಕ್ರಾಂತಿ ಹಬ್ಬದ ವೇಳೆ ಆಪರೇಷನ್ ಫಿಕ್ಸ್ ಆಗಿದ್ದು, ಮೈಸೂರಿನ ಆಸ್ಪತ್ರೆಯೊಂದರಲ್ಲಿ ಆಪರೇಷನ್‍ಗೆ ಒಳಗಾಗಲಿದ್ದಾರೆ. ಅಪರೇಷನ್ ಮಾಡಿದ ಒಂದೂವರೆ ತಿಂಗಳು ಕೇವಲ ಚಿತ್ರೀಕರಣದಲ್ಲಿ ಮಾತ್ರ ಭಾಗಿಯಾಗಬಹುದು. ಫೈಟ್ ದೃಶ್ಯದಲ್ಲಿ ದರ್ಶನ್ ಭಾಗಿಯಾಗುವಂತಿಲ್ಲ ಎಂದು ದರ್ಶನ್‍ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ಅಜಯ್ ಹೆಗ್ಡೆ ಮಾಹಿತಿ ನೀಡಿದ್ದಾರೆ.
ಆಪರೇಷನ್ ಬಳಿಕ 3 ದಿನ ವಿಶ್ರಾಂತಿಯಲ್ಲಿರಬೇಕು ಎಂದು ವೈದ್ಯರು ತಿಳಿಸಿದ್ದಾರೆ. ದರ್ಶನ್ ಈಗ ವರ್ಕೌಟ್ ಶುರು ಮಾಡಿದ್ದಾರೆ. ಅಪ್ಪರ್ ಬಾಡಿ, ಲೋಯರ್ ಬಾಡಿ ವರ್ಕೌಟ್ ಮಾಡಲು ಬಿಟ್ಟಿಲ್ಲ ಎಂದು ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.
ಡೆವಿಲ್ ಚಿತ್ರವನ್ನು ಮಿಲಿನ ಪ್ರಕಾಶ್ ನಿರ್ದೇಶಿಸುತ್ತಿದ್ದು, ರಚನಾ ರೈ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಡೆವಿಲ್ ಚಿತ್ರದ ಶೇ. 50 ರಷ್ಟು ಭಾಗದ ಚಿತ್ರೀಕರಣವನ್ನು ದರ್ಶನ್ ಜೈಲು ಸೇರುವ ಮುನ್ನ ಮುಗಿಸಿದ್ದರು. ಹೊಸ ವರ್ಷದ ದಿನದಂದು ‘ಡೆವಿಲ್’ ಚಿತ್ರದ ಡಬ್ಬಿಂಗ್ ಕೆಲಸವನ್ನು ದರ್ಶನ್ ಶುರು ಮಾಡಿದ್ದಾರೆ. ದರ್ಶನ್ ಇಲ್ಲಿಯವರೆಗೆ ಚಿತ್ರೀಕರಣಗೊಂಡ ತಮ್ಮ ಭಾಗಕ್ಕೆ ಡಬ್ಬಿಂಗ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
Be the first to comment