‘ಡೆವಿಲ್’ ಎರಡನೇ ದಿನ ಕಲೆಕ್ಷನ್‌ನಲ್ಲಿ ಇಳಿಕೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ  ‘ಡೆವಿಲ್’ ಸಿನಿಮಾ ಎರಡನೇ ದಿನ ಕಲೆಕ್ಷನ್‌ನಲ್ಲಿ ಸ್ವಲ್ಪ ಇಳಿಕೆ ಕಂಡಿದೆ.

ಚಿತ್ರತಂಡ ನೀಡಿದ ಮಾಹಿತಿಯಂತೆ  ‘ಡೆವಿಲ್’ ಮೊದಲ ದಿನವೇ 13.8 ಕೋಟಿ ₹ ಕಲೆಕ್ಷನ್ ಮಾಡಿ ಬಾಕ್ಸಾಫೀಸ್‌ನಲ್ಲಿ ಬಂಪರ್ ಕಲೆಕ್ಷನ್‌ ಪಡೆದಿತ್ತು. ಎರಡನೇ ದಿನ ವೀಕ್‌ಡೇ   ಹಾಗೂ ಫ್ಯಾನ್ಸ್ ಶೋಗಳು ಇಲ್ಲದ ಕಾರಣ  ಥಿಯೇಟರ್ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ  ಹರಿದು ಬರಲಿಲ್ಲ.  ಪರಿಣಾಮವಾಗಿ ‘ಡೆವಿಲ್’ ಎರಡನೇ ದಿನದ ಕಲೆಕ್ಷನ್ ಕಡಿಮೆಯಾಗಿದೆ. ವೀಕೆಂಡ್‌ನಲ್ಲಿ ಸಿನಿಮಾಗೆ ಮತ್ತೊಮ್ಮೆ ಜೋರಾದ ಸ್ಪಂದನೆ ಸಿಗುವ ನಿರೀಕ್ಷೆಯಿದೆ.

‘ಡೆವಿಲ್’ ಸಿನಿಮಾ ಎರಡನೇ ದಿನ ಸುಮಾರು   ₹5.5 ಕೋಟಿ ಕಲೆಕ್ಷನ್ ಮಾಡಿದೆ. ಒಟ್ಟು  ಎರಡು ದಿನಗಳ ಕಲೆಕ್ಷನ್  ₹19.2 ಕೋಟಿ ಎಂದು ಅಂದಾಜಿಸಲಾಗಿದೆ. ಶನಿವಾರ ಮತ್ತು ಭಾನುವಾರ ಈ ಎರಡು ದಿನಗಳಲ್ಲಿ ‘ಡೆವಿಲ್’ ₹15 ರಿಂದ ₹20 ಕೋಟಿ ಕಲೆಕ್ಷನ್ ಮಾಡಿ ಒಟ್ಟು ಗಳಿಕೆ ಸುಮಾರು ₹50 ಕೋಟಿ ಹತ್ತಿರ ತಲುಪುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ರೇಣುಕಾಸ್ವಾಮಿ ಪ್ರಕರಣದ ಬಳಿಕ ದರ್ಶನ್ ಜೈಲು ಸೇರಿದ್ದರಿಂದ ಅವರ ಸಿನಿ ಕರಿಯರ್ ಮೇಲೆ ದೊಡ್ಡ ಮಟ್ಟದ ಪರಿಣಾಮ ಬಿದ್ದಿದೆ.   ದರ್ಶನ್ ಅವರ ಖದರ್ ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಸಂಪೂರ್ಣವಾಗಿ ‘ಡೆವಿಲ್’ ಸಿನಿಮಾದ ಮೇಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!