ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಡೆವಿಲ್ ಚಿತ್ರದ ಮೊದಲ ಪ್ರದರ್ಶನ ಡಿಸೆಂಬರ್ 11ರಂದು ಬೆಳಿಗ್ಗೆ 6.30 ರಿಂದ ಆರಂಭವಾಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ನಿರ್ದೇಶಕ ಪ್ರಕಾಶ್ ವೀರ್, ಚಿತ್ರದ ಟ್ರೈಲರ್ ಡಿಸೆಂಬರ್ 5ರಂದು ಬೆಳಗ್ಗೆ 10. 05ಕ್ಕೆ ಬಿಡುಗಡೆ ಆಗಲಿದೆ. ಚಿತ್ರದ ಕುರಿತು ಪ್ರತಿಯೊಂದು ಅಪ್ಡೇಟ್ ಗಳನ್ನು ದರ್ಶನ್ ಅವರಿಗೆ ನೀಡಲಾಗುತ್ತಿದೆ. ಅವರು ಅಕ್ಟೋಬರ್ ನಲ್ಲಿ ಚಿತ್ರ ಬಿಡುಗಡೆ ಮಾಡಲು ಬಯಸಿದ್ದರು. ಆದರೆ ಚಿತ್ರ ಸಿದ್ಧ ಇಲ್ಲದ ಕಾರಣ ಅದು ಸಾಧ್ಯವಾಗಲಿಲ್ಲ. ಅವರು ಜೈಲ್ ನಿಂದ ಬರುತ್ತಾರೆ ಎಂಬ ಆಸೆಯಲ್ಲಿ ಇಷ್ಟು ದಿನ ಕಾದಿದ್ದೇವೆ. ಅವರು ಇದ್ದಿದ್ದರೆ ಆನೆ ಬಲ ಇತ್ತು ಎಂದು ಹೇಳಿದರು.
ಅವರು ಯಾವತ್ತೂ ವೈಯಕ್ತಿಕ ವಿಚಾರಗಳನ್ನು ಚಿತ್ರೀಕರಣದ ಸೆಟ್ಟಿಗೆ ತರುತ್ತಿರಲಿಲ್ಲ. ಬೆನ್ನು ನೋವಿನ ಕಾರಣಕ್ಕೆ ಔಷಧ ತೆಗೆದುಕೊಳ್ಳುತ್ತಿದ್ದರು. ನಾವು ಸಿನಿಮಾ ಕುರಿತು ಮಾತ್ರ ಮಾತನಾಡುತ್ತಿದ್ದೆವು ಎಂದರು.
ಚಿತ್ರದ ಪ್ರಮುಖ ಪಾತ್ರಧಾರಿ ಶರ್ಮಿಳಾ ಮಾಂಡ್ರೆ ಮಾತನಾಡಿ, 18 ವರ್ಷದ ಹಿಂದೆ ದರ್ಶನ್ ಜೊತೆ ನವಗ್ರಹ ಚಿತ್ರ ಮಾಡಿದ್ದೆ ಎಂದು ನೆನಪಿಸಿಕೊಂಡರು.
ನಾಯಕ ನಟಿ ರಚನಾ ರೈ, ಇಡೀ ಕರ್ನಾಟಕಕ್ಕೆ ನನ್ನನ್ನು ಪರಿಚಯಿಸಿದ ಸಿನಿಮಾ ಇದಾಗಿದೆ ಎಂದರು.
ಈ ಸಂದರ್ಭದಲ್ಲಿ ಕಲಾವಿದರಾದ ಅಚ್ಚುತ್ ಕುಮಾರ್, ಯುವರಾಜ್, ಹುಲಿ ಕಾರ್ತಿಕ್, ಸೋನಿಯಾ, ಕಾರ್ಯಕಾರಿ ನಿರ್ಮಾಪಕಿ ತಶ್ವಿನಿ, ಸಂಭಾಷಣೆಕಾರ ಕಾಂತರಾಜ್, ಚಿತ್ರ ಸಾಹಿತಿ ಪ್ರಮೋದ್ ಮರವಂತೆ, ಅನಿರುದ್ಧ ಶಾಸ್ತ್ರಿ ಇದ್ದರು.





Be the first to comment