ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್, ಜೈಲಿನಲ್ಲಿರುವಾಗಲೇ ‘ಡೆವಿಲ್’ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ಮೂಲಗಳು ತಿಳಿಸಿವೆ.
ದರ್ಶನ್ ‘ಡೆವಿಲ್’ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಬೇಲ್‌ನಲ್ಲಿ ಬಿಡುಗಡೆಯಾದ ನಂತರ ಶೂಟಿಂಗ್ ಮುಗಿಸಿ ಈಗ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಮಿಲನ ಪ್ರಕಾಶ್ ನಿರ್ಮಿಸಿರುವ ಈ ಚಿತ್ರವನ್ನು ದರ್ಶನ್ ಜೈಲಿನಲ್ಲಿರುವಾಗಲೇ ಬಿಡುಗಡೆ ಮಾಡುವ ಯೋಜನೆ ಇದೆ. ರಾಜ್ಯಾದ್ಯಂತ ದರ್ಶನ್ ಅವರ ಅಭಿಮಾನಿ ಬಳಗ ಇರುವುದರಿಂದ ‘ಡೆವಿಲ್’ ಹಿಟ್ ಆಗುತ್ತದೆ ಎಂಬ ನಿರೀಕ್ಷೆ ಇದೆ.
ದರ್ಶನ್ ನ್ನು 2011ರ ಫೆಬ್ರವರಿ 9ರಂದು ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಆ ಸಮಯದಲ್ಲೇ ಅವರ ಸಾರಥಿ ಸಿನಿಮಾ ಬಿಡುಗಡೆಯಾಗಿತ್ತು. ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿ ಚಿತ್ರ ದರ್ಶನ್‌ಗೆ ಚಿತ್ರರಂಗದಲ್ಲಿ ಮರುಜನ್ಮ ನೀಡಿತ್ತು.
ರೇಣುಕಾಸ್ವಾಮಿ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರು ಅರೆಸ್ಟ್ ಆದಾಗ ‘ಡೆವಿಲ್’ ಚಿತ್ರದ ಶೂಟಿಂಗ್ ನಿಂತಿತು. ಕೆಲವು ತಿಂಗಳ ಬಳಿಕ ಅವರು ಬೇಲ್ ಪಡೆದು ಹೊರಗೆ ಬಂದರು. ಬಳಿಕ ಚಿತ್ರೀಕರಣದಲ್ಲಿ ತೊಡಗಿಸಿಕೊಂಡರು. ದರ್ಶನ್ ಅವರು ನ್ಯಾಯಾಲಯದಿಂದ ಅನುಮತಿ ಪಡೆದು ಸಿನಿಮಾದ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಿದ್ದರು. ದರ್ಶನ್ ತಮ್ಮ ಪಾಲಿನ ಚಿತ್ರೀಕರಣವನ್ನು ಮುಗಿಸಿ ಕೊಟ್ಟಿದ್ದಾರೆ. ಡಬ್ಬಿಂಗ್ ಕೂಡ ಪೂರ್ಣಗೊಳಿಸಿದ್ದಾರೆ.
ಎರಡು ಸಿನಿಮಾಗಳ ಕುರಿತು ದರ್ಶನ್ ಚರ್ಚೆ ನಡೆಸಿದ್ದರೂ, ಶೂಟಿಂಗ್ ಪ್ರಾರಂಭವಾಗಿಲ್ಲ.
—-





Pingback: buy cheap enclomiphene price australia