ಡೆವಿಲ್

‘ಡೆವಿಲ್’ ಚಿತ್ರದ ಹಾಡು ರಿಲೀಸ್

ದರ್ಶನ್ ಹಾಗೂ ರಚನಾ ರೈ ನಟನೆಯ ಡೆವಿಲ್ ಸಿನಿಮಾದ ‘ಒಂದೇ ಒಂದು ಸಲ‘ ಹಾಡು ಬಿಡುಗಡೆಯಾಗಿದೆ.

ಈಗಾಗಲೇ ಈ ಚಿತ್ರದ ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಸಾಂಗ್ ರಿಲೀಸ್ ಆಗಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು. ಈಗ ಥೈಲ್ಯಾಂಡ್‌ನಲ್ಲಿ ಶೂಟಿಂಗ್ ಆಗಿರುವ ಡೆವಿಲ್ ಚಿತ್ರದ ಹಾಡು ಕೇಳಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ಈ ಹಾಡಿನ ಮೂಲಕ ದರ್ಶನ್ ಹಾಗೂ ರಚನಾ ರೈ ಮೊದಲ ಬಾರಿ ಒಟ್ಟಿಗೆ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಸಂತು ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಆಕರ್ಷಕ ಕಾಸ್ಟ್ಯೂಮ್‌ನಲ್ಲಿ ದರ್ಶನ್ ಮಿಂಚಿದ್ದಾರೆ.

ಕಳೆದ ಜುಲೈ ತಿಂಗಳಲ್ಲಿ ಕೋರ್ಟ್ ಅನುಮತಿ ಪಡೆದುಕೊಂಡು ದರ್ಶನ್ ಥೈಲ್ಯಾಂಡ್‌ಗೆ ತೆರಳಿದ್ದರು. ಅಲ್ಲಿ ಚಿತ್ರೀಕರಣವಾದ ‘ಒಂದೇ ಒಂದು ಸಲ’ ಹಾಡು ರಿಲೀಸ್ ಆಗಿ ಅಭಿಮಾನಿಗಳಿಗೆ ಆನಂದಿಸಲು ಲಭ್ಯವಾಗಿದೆ.

ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದ ಹಾಡಿಗೆ ಪ್ರಮೋದ್ ಮರವಂತೆ ಅವರ ಸಾಹಿತ್ಯವಿದೆ. ಈ ಹಾಡು ಕಪಿಲ್ ಕಪಿಲನ್ ಹಾಗೂ ಚಿನ್ಮಯಿ ಶ್ರೀಪಾದ ಧ್ವನಿಯಲ್ಲಿ ಮೂಡಿ ಬಂದಿದೆ.

ಡಿಸೆಂಬರ್ ತಿಂಗಳಿನಲ್ಲಿ ಡೆವಿಲ್ ಸಿನಿಮಾ ಬಿಡುಗಡೆ ಆಗಲಿದ್ದು, ದರ್ಶನ್ ನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾದಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!