ಚಾಲೆಂಜಿಂಗ್‌ ಸ್ಟಾರ್‌  ‘ಡೆವಿಲ್’ಗೆ ನಾಯಕಿ ಯಾರು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ  ‘ಡೆವಿಲ್’  ಚಿತ್ರದ ಮುಹೂರ್ತ ನೆರವೇರಿದ್ದು, ಈ ಸಿನಿಮಾಗೆ ಕರಾವಳಿ ಮೂಲದ ರಚನಾ ರೈ ನಾಯಕಿಯಾಗಿ ಆಯ್ಕೆ ಖಚಿತ ಎನ್ನುವ ಮಾತುಗಳು ಕೇಳಿ ಬಂದಿದೆ.

ನಿರ್ದೇಶಕ ಮಿಲನಾ ಪ್ರಕಾಶ್ ‘ಡೆವಿಲ್’ ಆಕ್ಷನ್ ಎಂಟರ್‌ಟೈನರ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.  ದರ್ಶನ್ ಹಾಗೂ ಪ್ರಕಾಶ್ ಕಾಂಬಿನೇಷನ್‌ನಲ್ಲಿ ‘ತಾರಕ್’ ಚಿತ್ರ ಮೂಡಿಬಂದಿದ್ದು, ಸಹಜವಾಗಿ ಈ ಜೋಡಿಯ ಎರಡನೇ ಸಿನಿಮಾ ಕುತೂಹಲ ಮೂಡಿಸಿದೆ.

ರಚನಾ ರೈ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನುವ ಗುಸುಗುಸು  ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಈ ಚಿತ್ರದ ನಾಯಕಿ ಯಾರು ಎನ್ನುವುದು ಅಧಿಕೃತವಾಗಿ ಘೋಷಣೆ ಆಗಿಲ್ಲ. ನಾಯಕಿಯ ಹೆಸರು ಹೊರಬರುತ್ತಿದ್ದಂತೆ ರಚನಾ ರೈ ಯಾರು, ಹಿನ್ನೆಲೆ ಏನು ಎಂದು ದರ್ಶನ್ ಫ್ಯಾನ್ಸ್‌ ಹುಡುಕಲು ಆರಂಭಿಸಿದ್ದಾರೆ.

ರಚನಾ ರೈ ಪುತ್ತೂರಿನಲ್ಲಿ ಹುಟ್ಟಿ ಬೆಳೆದವರು ಮಾಡೆಲಿಂಗ್ ಕ್ಷೇತ್ರದಲ್ಲಿ ಗುರ್ತಿಸಿಕೊಳ್ಳುವುದರ ಜೊತೆಗೆ ‘ಸರ್ಕಸ್’ ಎನ್ನುವ ತುಳು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಈ ನಟಿ ಧನ್ವೀರ್ ಗೌಡ ನಟನೆಯ ‘ವಾಮನ’ ಚಿತ್ರದಲ್ಲಿ ಕೂಡ ನಟಿಸಿದ್ದು, ಈ ಸಿನಿಮಾ ಮೂಲಕ ಕೋಸ್ಟಲ್‌ವುಡ್‌ನಿಂದ ಸ್ಯಾಂಡಲ್‌ವುಡ್‌ಗೆ ಬಂದಿದ್ದಾರೆ.

 ‘ಡೆವಿಲ್’ ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ರಚನಾ ರೈ ಕಾಣಿಸಿಕೊಳ್ಳುತ್ತಾರೆ ಎನ್ನುವ  ಸುದ್ದಿ ಕೇಳಿಬರುತ್ತಿದ್ದಂತೆ ಅಭಿಮಾನಿಗಳು  ಇನ್‌ಸ್ಟಾಗ್ರಾಂ ಅಕೌಂಟ್ ತಡಕಾಡಲು ಆರಂಭಿಸಿದ್ದಾರೆ. ರಚನಾ ರೈ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆಯು ಹೆಚ್ಚಾಗಿದೆ. ದರ್ಶನ್ ಫ್ಯಾನ್ಸ್ ಇನ್‌ಸ್ಟಾದಲ್ಲಿ ಹೆಚ್ಚು ಫಾಲೋ ಮಾಡಲು ಆರಂಭಿಸಿದ್ದಾರೆ. ರಚನಾ ರೈ ಫೋಟೊಗಳು ವೈರಲ್ ಆಗುತ್ತಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!