ಡೆವಿಲ್ ಭರ್ಜರಿ ಆರಂಭ

ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅನುಪಸ್ಥಿತಿಯಲ್ಲಿ ಇಂದು ಬಿಡುಗಡೆ ಆಗಿರುವ ‘ದಿ ಡೆವಿಲ್’ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಇಂದು ಮುಂಜಾನೆ 6.30ರಿಂದ ಶೋಗಳು ಆರಂಭ ಆಗಿವೆ.  ಮಲ್ಟಿಪ್ಲೆಕ್ಸ್​ಗಳಲ್ಲಿಯೂ  ಫ್ಯಾನ್ಸ್‌ ಸಿನಿಮಾ  ದೊಡ್ಡ ಸಂಖ್ಯೆಯಲ್ಲಿ ವೀಕ್ಷಣೆ ಮಾಡುತ್ತಿದ್ದಾರೆ. ಎಲ್ಲಾ ಶೋಗಳು ಹೌಸ್​ಫುಲ್ ಆಗಿವೆ.  ದರ್ಶನ್‌ ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್‌, ನಟ ಧನ್ವೀರ್‌, ರಚಿತಾ ರಾಮ್  ಥಿಯೇಟರ್‌ಗೆ ಬಂದು, ಫ್ಯಾನ್ಸ್‌ ಜೊತೆ ಸಿನಿಮಾ ನೋಡಿದ್ದಾರೆ.

ದರ್ಶನ್ ಅಭಿಮಾನಿಗಳು ಡೆವಿಲ್ ಸಿನಿಮಾವನ್ನು ಗೆಲ್ಲಿಸಲೇಬೇಕು ಎಂದು ಹಠಕ್ಕೆ ಬಿದ್ದಿದ್ದಾರೆ.  ಹಲವು ಕಡೆ ಫ್ಯಾನ್ಸ್‌ ಶೋ ಇಡಲಾಗಿತ್ತು. ಅಭಿಮಾನಿಗಳಿಂದಾಗಿ ಫಸ್ಟ್ ಡೇ ಫಸ್ಟ್ ಶೋ ಹೌಸ್‌ಫುಲ್‌ ಆಗಿ  ಶೋಗಳ ಸಂಖ್ಯೆ ಹೆಚ್ಚಳವಾಗಿದೆ.

ಬೆಂಗಳೂರಿನಲ್ಲಿ‌ ಕೆಲವು ಮಲ್ಟಿಫ್ಲೆಕ್ಟ್‌ನಲ್ಲಿ ಒಂದೇ ದಿನ 30 ಶೋಗಳು ಬುಕ್ ಆಗಿವೆ. ಟಿಕೆಟ್‌ ದರ  900 ರೂಪಾಯಿವರೆಗೆ ಏರಿಕೆಯಾಗಿದೆ. ಬಹುತೇಕ ಕಡೆ 500 ರೂಪಾಯಿಯಿಂದ 600 ರೂಪಾಯಿವರೆಗೂ ಟಿಕೆಟ್‌ ದರವಿದೆ.

‘ದಿ ಡೆವಿಲ್‌’ ಸಿನಿಮಾ ರಿಲೀಸ್‌ ಮುನ್ನವೇ ಅಂದಾಜು 3.5 ಕೋಟಿ ರೂ.ಗೂ ಅಧಿಕ ಸಂಗ್ರಹಣೆ ಮಾಡಿದೆ.  ಡೆವಿಲ್ ಸಿನಿಮಾ ನಿರ್ಮಾಣ ಸಂಸ್ಥೆ ಜೈ ಮಾತಾ ಮಾತಾ ಕಂಬೈನ್ಸ್‌   ಈ ಕುರಿತು ಪೋಸ್ಟರ್‌ ಬಿಡುಗಡೆ ಮಾಡಿದೆ. ‘ಒಂದು ಐಕಾನ್‌, ಒಂದು ಅತ್ಯುತ್ಸಾಹದ ಫ್ಯಾನ್ಸ್‌ ಬಳಗದಿಂದ ಸಂಗ್ರಹವಾದ ಮೊತ್ತ 2 ಕೋಟಿ 52 ಲಕ್ಷ ರೂಪಾಯಿ’ ಎಂದು ತಿಳಿಸಿದೆ.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!