ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ಇತ್ತೀಚಿಗೆ ಜಾಮೀನು ಪಡೆದ ನಟ ದರ್ಶನ್ ತಮ್ಮ ಮುಂದಿನ ‘ಡೆವಿಲ್’ ಚಿತ್ರದ ಡಬ್ಬಿಂಗ್ ಕೆಲಸವನ್ನು ಆರಂಭಿಸಿದ್ದಾರೆ.
ಡೆವಿಲ್ ಚಿತ್ರದ ಶೇ. 50 ರಷ್ಟು ಭಾಗದ ಚಿತ್ರೀಕರಣವನ್ನು ದರ್ಶನ್ ಜೈಲು ಸೇರುವ ಮುನ್ನ ಮುಗಿಸಿದ್ದರು. ಹೊಸ ವರ್ಷದ ಮೊದಲ ದಿನ ಚಿತ್ರಕ್ಕೆ ಸಂಬಂಧಿಸಿದ ಯಾವುದಾದರೂ ಕೆಲಸವನ್ನು ಮಾಡಿಕೊಂಡು ಬರುವ ಸಂಪ್ರದಾಯವನ್ನು ದರ್ಶನ್ ಪಾಲಿಸಿಕೊಂಡು ಬಂದಿದ್ದಾರೆ. ಹೊಸ ವರ್ಷದ ದಿನದಂದು ‘ಡೆವಿಲ್’ ಚಿತ್ರದ ಡಬ್ಬಿಂಗ್ ಕೆಲಸವನ್ನು ಶುರು ಮಾಡಿದ್ದಾರೆ. ಬೆನ್ನು ನೋವಿಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೂ ದರ್ಶನ್, ಇಲ್ಲಿಯವರೆಗೆ ಚಿತ್ರೀಕರಣಗೊಂಡ ತಮ್ಮ ಭಾಗಕ್ಕೆ ಡಬ್ಬಿಂಗ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಡೆವಿಲ್ ಚಿತ್ರವನ್ನು ಮಿಲಿನ ಪ್ರಕಾಶ್ ನಿರ್ದೇಶಿಸುತ್ತಿದ್ದು, ರಚನಾ ರೈ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಫೆಬ್ರವರಿ 22 ರ ನಂತರ ಚಿತ್ರೀಕರಣದಲ್ಲಿ ದರ್ಶನ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಫೆಬ್ರವರಿ 16ರಂದು ದರ್ಶನ್ ಬರ್ತ್‌ಡೇ ಪ್ರಯುಕ್ತ ಡೆವಿಲ್ ಚಿತ್ರದ ಕುರಿತು ಬ್ರೇಕಿಂಗ್ ನ್ಯೂಸ್ ಹೊರ ಬೀಳುವ ಸಾಧ್ಯತೆ ಇದೆ.
Be the first to comment