ಭರ್ಜರಿ ಬೆಲೆಗೆ ‘ಡೆವಿಲ್’ ಆಡಿಯೋ ಹಕ್ಕು ಮಾರಾಟ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದಿನ ಚಿತ್ರ ‘ಡೆವಿಲ್-ದಿ ಹೀರೋ’ ದ ಆಡಿಯೋ ಹಕ್ಕುಗಳನ್ನು ಜನಪ್ರಿಯ ಸರಿಗಮ – ಸೌತ್ ಗೆ ಭಾರಿ ಬೆಲೆಗೆ ಮಾರಾಟ ಮಾಡಲಾಗಿದೆ.

ಸರಿಗಮದಂತಹ ಹೆಸರಾಂತ ಮ್ಯೂಸಿಕ್ ಕಂಪನಿ ಚಿತ್ರದ ಹಕ್ಕುಗಳನ್ನು ಖರೀದಿಸಲು ಆಸಕ್ತಿ ತೋರಿಸಿದೆ ಎಂಬುದು ನಮಗೆ ಸಂತೋಷವಾಗಿದೆ. ವಿವಿಧ ಸಂಗೀತ ಕಂಪನಿಗಳಿಂದ ಆಡಿಯೋಗೆ ಬೇಡಿಕೆ ಬಂದಿತ್ತು. ಅಂತಿಮವಾಗಿ ಸರಿಗಮ – ಸೌತ್ ಗೆ ಆಡಿಯೋ ಹಕ್ಕು ಮಾರಾಟ ಮಾಡಿರುವುದಾಗಿ ಪ್ರಕಾಶ್ ತಿಳಿಸಿದ್ದಾರೆ.

ಕಾಟೇರ ಚಿತ್ರದ ಮೂಲಕ ಬ್ಲಾಕ್ ಬಸ್ಟರ್ ಹಿಟ್ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದಿನ ಚಿತ್ರ ಡೆವಿಲ್-ದಿ ಹೀರೋ ಈಗಾಗಲೇ ಭಾರಿ ಸದ್ದು ಮಾಡುತ್ತಿದೆ.  ದರ್ಶನ್ ಅವರ ಹುಟ್ಟುಹಬ್ಬದ ಮುನ್ನಾದಿನದಂದು ಬಿಡುಗಡೆಯಾಗಲಿರುವ ಫಸ್ಟ್ ಲುಕ್ ಟೀಸರ್ ನ್ನು ತಯಾರಕರು ಪ್ರತ್ಯೇಕವಾಗಿ ಚಿತ್ರೀಕರಿಸಿದ್ದಾರೆ.

“ಫಸ್ಟ್ ಲುಕ್ ಟೀಸರ್ ವಿಶಿಷ್ಟವಾಗಿದೆ.ಸಂಗೀತ ಸಂಯೋಜಕ ಅಜನೀಶ್ ಲೋಕನಾಥ್ ಇದಕ್ಕಾಗಿ ಥೀಮ್ ಮ್ಯೂಸಿಕ್ ಸಂಯೋಜಿಸಿದ್ದಾರೆ” ಎಂದು ಪ್ರಕಾಶ್ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ನಿರತರಾಗಿರುವ ನಿರ್ದೇಶಕರು ನಾಯಕ ದರ್ಶನ್ ಹೊರತುಪಡಿಸಿ ಉಳಿದ ತಾರಾಗಣವನ್ನು ಅಂತಿಮಗೊಳಿಸಿಲ್ಲ. ಈ ಬಗ್ಗೆ ನಿರ್ದೇಶಕರು ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಿದ್ದಾರೆ.

ಜೈ ಮಠ ಕಂಬೈನ್ಸ್ ಪ್ರಸ್ತುತಪಡಿಸುವ,  ಜೆ ಜಯಮ್ಮ ಮತ್ತು ಪ್ರಕಾಶ್ ವೀರ್ ಅವರು ತಮ್ಮ ಹೋಮ್ ಬ್ಯಾನರ್ನಡಿಯಲ್ಲಿ ವೈಷ್ಣೋ ಸ್ಟುಡಿಯೋಸ್ನಲ್ಲಿ ನಿರ್ಮಿಸುತ್ತಿರುವ ‘ಡೆವಿಲ್-ದಿ ಹೀರೋ’ ಚಿತ್ರಕ್ಕೆ ಛಾಯಾಗ್ರಾಹಕ ಸುಧಾಕರ್ ಎಸ್ ರಾಜ್, ದರ್ಶನ್ ಅವರ ಚಿತ್ರಕ್ಕೆ ಕೈಜೋಡಿಸಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!