ಲೈಗರ್ ಸಿನಿಮಾ ಸೋತ ಹಿನ್ನೆಲೆಯಲ್ಲಿ ನಾಯಕ ನಟ ವಿಜಯ್ ದೇವರಕೊಂಡ 6 ಕೋಟಿ ಸಂಭಾವನೆಯನ್ನು ನಿರ್ದೇಶಕರಿಗೆ ವಾಪಸ್ ಮಾಡಿದ್ದಾರೆ.
ಚಿತ್ರಕ್ಕೆ ವಿಜಯ್ ದೇವರಕೊಂಡ 20 ಕೋಟಿ ಸಂಭಾವನೆ ಪಡೆದುಕೊಂಡಿದ್ದರು. ಈಗ 6 ಕೋಟಿಯನ್ನು ನಿರ್ದೇಶಕರಿಗೆ ವಾಪಸ್ ಮಾಡಿದ್ದಾರೆ ಎಂದು ಹೇಳಲಾಗಿದೆ.
ಬಾಲಿವುಡ್ ಪ್ರವೇಶಿಸಲು ಲೈಗರ್ ಸಹಾಯ ಮಾಡುತ್ತದೆ ಎಂದು ವಿಜಯ್ ಅಂದುಕೊಂಡಿದ್ದರು ಆದರೆ boycott bollywood ಅವರ ಪ್ಲ್ಯಾನ್ ಫ್ಲಾಪ್ ಮಾಡಿದೆ. ಸ್ಟಾರ್ ನಿರ್ದೇಶಕ ಪುರಿ ಜಗನ್ನಾಥ್ ಅವರಿಗೆ ಅವಮಾನ ಆಗುತ್ತಿದೆ ಎಂದು ವಿಜಯ್ ಪಡೆದುಕೊಂಡಿರುವ ಸಂಭಾವನೆಯಲ್ಲಿ ದೊಡ್ಡ ಪಾಲನ್ನು ತಂಡಕ್ಕೆ ಹಿಂತಿರುಗಿಸಿದ್ದಾರೆ ಎನ್ನಲಾಗಿದೆ.
ಟಾಲಿವುಡ್ ಲವರ್ ಬಾಯ್ ವಿಜಯ್ ದೇವರಕೊಂಡ ಮತ್ತು ಬಾರ್ಬಿ ಡಾಲ್ ಅನನ್ಯಾ ಪಾಂಡೆ ನಟಿಸಿರುವ ಲೈಗರ್ ಸಿನಿಮಾ ಕನ್ನಡ, ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗಿತ್ತು. ಪುರಿ ಜಗನ್ನಾಥ್ ಅಕ್ಷನ್ ಕಟ್ ಹೇಳಿರುವ ಸಿನಿಮಾ ಸೂಪರ್ ಹಿಟ್ ಅಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಪ್ರಚಾರದ ವೇಳೆ ಬಾಯ್ಕಾಟ್ ಮಾಡಿ ನೋಡೋಣ ಎಂದು ಕೊಟ್ಟ ಹೇಳಿಕೆ ಸಿನಿಮಾ ತಂಡಕ್ಕೆ ಹೊಡೆತ ಬೀಳುವಂತೆ ಮಾಡಿದೆ.
ಲಯನ್ ಹಾಗೂ ಟೈಗರ್ ಸೇರಿದರೆ ಹುಟ್ಟುವ ಜೀವಿ ಹೇಗಿರುತ್ತದೆ ಎನ್ನುವ ರೋಮಾಂಚಕಾರಿ ಕಲ್ಪನೆಗೆ ತಕ್ಕಂತೆ ವಿಜಯ್ ದೇವರಕೊಂಡ ಪಾತ್ರವನ್ನು ರೂಪಿಸಿ ‘ಲೈಗರ್’ ಚಿತ್ರವನ್ನು ನಿರ್ದೇಶಕ ಪುರಿ ಜಗನ್ನಾಥ್ ಕಟ್ಟಿದ್ದರು. ಆದರೆ ಚಿತ್ರ ಪ್ರೇಕ್ಷಕರ ಮನ ಮುಟ್ಟುವಲ್ಲಿ ಸೋತು ಹೋಯಿತು.
__
Be the first to comment