‘ದೇವರ’ ಉಡಾಫೆ!

ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಜೋಡಿಯ ಡಿಯರ್ ಕಾಮ್ರೇಡ್ ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗುತ್ತಿರೋದು ನಿಮ್ಗೆ ಗೊತ್ತಿರೋ ಸಂಗ್ತಿ.

ದಕ್ಷಿಣದಲ್ಲಿ ಭಾರಿ ಸದ್ದು ಮಾಡಿರುವ ಸಿನಿಮಾ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಜೋಡಿಯ ‘ಡಿಯರ್ ಕಾಮ್ರೇಡ್’, ಈ ಸಿನಿಮಾ ಇದೇ ಜುಲೈ 26ರಂದು ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ.
ಚಿತ್ರದಲ್ಲಿನ ಕಿಸ್ಸಿಂಗ್ ದೃಶ್ಯಗಳ ಬಗ್ಗೆ.. “ಟ್ರೇಲರ್ ನೋಡಿದರೆ ನಿಮಗೆ ಅರ್ಥವಾಗುತ್ತದೆ. ಇದೊಂದು ಭಿನ್ನವಾದ ಸಬ್ಜೆಕ್ಟ್ ಇರುವ ಸಿನಿಮಾ ಅಂತ. ಎಲ್ಲಾ ಎಮೋಷನ್ಸ್ ಇದೆ. ಆದರೂ ಕಿಸ್ಸಿಂಗ್ ಸೀನ್ ಬಗ್ಗೆಯೇ ಹೆಚ್ಚಾಗಿ ಚರ್ಚೆ ನಡೆಯುತ್ತಿದೆ. ಚಿತ್ರದಲ್ಲಿ ಬರುವ ಭಾವನಾತ್ಮಕ ಅಂಶಗಳಲ್ಲಿ ಅದೂ ಒಂದು ಅಷ್ಟೇ” ಎಂದಿರುವ ರಶ್ಮಿಕಾ ಜಾಣ ಉತ್ತರ ಕೊಟ್ಟು ತಮ್ಮ ಮತ್ತು ದೇವರ ನಡುವಿನ ಕಿಸ್ಸಿಂಗ್ ಪುರಾಣಕ್ಕೆ ಪುಲ್‍ಸ್ಟಾಪ್ ಇಟ್ಟು ಎಸ್ಕೇಪ್ ಆಗಿದ್ದಾರೆ. ಇನ್ನು, ಕಿಸ್ಸಿಂಗ್ ಸೀನ್ ಬಗ್ಗೆ ಮಾತನಾಡಿದ ವಿಜಯ್ ದೇವರಕೊಂಡ, “ಅರ್ಜುನ್ ರೆಡ್ಡಿ ನೋಡಿದ ಬಳಿಕ ಜನ ನನ್ನನ್ನು ನೋಡಿ ಭಯ ಬೀಳುವಂತಾಯಿತು. ಅದೊಂದು ಪಾತ್ರ ಎಂಬುದನ್ನೂ ಮರೆತರು. ನಿಜ ಜೀವನದಲ್ಲಿ ನಾನು ಸಿಗರೇಟ್ ಸಹ ಸೇದಲ್ಲ. ಈಗಲೂ ಅಷ್ಟೇ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇವರಿಬ್ಬರ ಕಿಸ್ಸಿಂಗ್ ಎಂದೇ ಭಾವಿಸುತ್ತಾರೆ. ಅದು ಆ ಪಾತ್ರಗಳು ಎಂದುಕೊಳ್ಳಲ್ಲ. ಪಾತ್ರಗಳನ್ನು ಪಾತ್ರಗಳ ತರಹ ನೋಡಿ. ನಿಜ ಜೀವನಕ್ಕೆ ಹೋಲಿಸಲು ಹೋಗಬೇಡಿ” ಎಂಬರ್ಥದಲ್ಲಿ ಮಾತಾನಾಡಿದ್ದರು. ಆದರೆ ದೇವರಕೊಂಡ, ರಶ್ಮಿಕಾ ಜೊತೆ ಹಿಂದಿನ ಚಿತ್ರದಲ್ಲೂ `ಕಿಸ್‍ಕಿಂಗ್’ ಆಗಿ ಫೇಮಸ್ ಆಗಿದ್ದರು. ಈಗ ಅದನ್ನು ವೈಯಕ್ತಿವಾಗಿ ತೆಗೆದುಕೊಳ್ಳದೆ ಪಾತ್ರವೆಂದೇ ತೆಗೆದುಕೊಳ್ಳೋಣ, ಹಾಗಿದ್ರೂ ಇವರ ಕಾಂಬೀನೇಶನ್‍ನ ಎರಡು ಚಿತ್ರಗಳಲ್ಲೂ ಲಿಪ್‍ಲಾಕ್ ಕಾಮನ್ ಫ್ಯಾಕ್ಟರ್! ವಿಜಯ್ ಮಾತು ಮುಂದುವರೆಸುತ್ತಾ..

“ಲಿಪ್ ಲಾಕ್ ಅಂದ್ರೆ ಏನು? ಈ ಪದ ನನಗಿಷ್ಟವಾಗಲಿಲ್ಲ. ಅಳುವುದು, ಕೋಪ ವ್ಯಕ್ತಪಡಿಸುವುದು, ಪ್ರೀತಿಯಿಂದ ಚುಂಬಿಸುವುದು ಇದೆಲ್ಲಾ ಭಾವನೆಗಳು. ಇದು ಲಿಪ್ಸ್ ಲಾಕಿಂಗ್ ಅಲ್ಲ. ಈ ಪದ ಕೇಳಿದಾಗ ನನಗೆ ತುಂಬಾ ಬೇಜಾರುತ್ತದೆ. ಇದು ಕಿಸ್ಸಿಂಗ್, ಭಾವಾತ್ಮಕ ಅಂಶ. ಅದಕ್ಕೆ ಬೆಲೆ ಕೊಡೋಣ” ಎಂದು ಲಿಪ್‌ಲಾಕ್ ಬಗ್ಗೆ ಹೇಳಿಕೊಂಡಿರುವ ವಿಜಯ್ ದೇವರಕೊಂಡ ಪಾಪ ಏನೂ ಗೊತ್ತಿಲ್ಲದ ರೀತಿಯಲ್ಲಿ ಮಾತನಾಡಿದ್ದಾರೆ. ಒಂದು ವೇಳೆ ವಿಜಯ್ ಪ್ರಕಾರ ಲಿಪ್‍ಲಾಕ್ ಕೂಡ ಒಂದು ಇಮೋಶನಲ್ ರಿಯಾಕ್ಷನ್ ಎಂದಾದರೆ, ಅದೇ ಇಮೋಶನ್ಸ್ ಅನ್ನ ಬೇರೆ ರೀತಿಯಲ್ಲೂ ಪ್ರೆಸೆಂಟ್ ಮಾಡಬಹುದಲ್ಲವೇ? ಪ್ರೀತಿಯ ಕ್ಲೈಮಾಕ್ಸ್‍ಗೆ ಲಿಪ್‍ಲಾಕ್ ಒಂದೇ ದಾರಿಯೇ?
ಇರಲಿ ಮುಂದೆ ಇದೇ ಕಿಸ್ಸಿಂಗ್ ಬಗ್ಗೆ ವಿಜಯ್ ಪತ್ರಕರ್ತರ ಮುಂದೆ ಸ್ವಲ್ಲ ಒರಟಾಗಿ ಮಾತನಾಡಿದ್ದ ಮಾತುಗಳು ಹೇಗಿದ್ದವು ನೋಡಿ..
“ಕಿಸ್ಸಿಂಗ್ ಸೀನ್ ಬಗ್ಗೆ ವಿವರಣೆ ನೀಡಬೇಕಾದ ಅಗತ್ಯವಿಲ್ಲ. ಆಯಾ ಪಾತ್ರ ಬಯಸಿದಂತೆ ನಾವು ಮಾಡಿದ್ದೇವೆ. ಸಿನಿಮಾವನ್ನು ವಿಮರ್ಶಿಸಿ, ಚೆನ್ನಾಗಿದೆ, ಚೆನ್ನಾಗಿಲ್ಲ ಎಂದು ಹೇಳುವ ಅಧಿಕಾರ ಎಲ್ಲರಿಗೂ ಇದೆ. ಆದರೆ ಆ ಪಾತ್ರ ಹಾಗ್ಯಾಕೆ, ಹೀಗೇಕೆ ಎಂಬ ಬಗ್ಗೆ ನಾವು ವಿವರಣೆ ನೀಡಬೇಕಾಗಿಲ್ಲ. ಅದಕ್ಕೆ ನ್ಯಾಯ ಸಲ್ಲಿಸುವುದಷ್ಟೇ ನಮ್ಮ ಕೆಲಸ” ಎಂದಿದ್ದರು. ಇವರು ಮಾಡುವ ಚಿತ್ರವನ್ನು ನೋಡಿ ವಿಮರ್ಶಿಸುವುದಷ್ಟೇ ಪತ್ರಕರ್ತರ ಕೆಲಸ ಅದು ಬಿಟ್ಟು ಇವರು `ಲಿಪ್‍ಲಾಕ್’ ಅನ್ನೇ ಪಬ್ಲಿಸಿಟಿ ಅಸ್ತ್ರವನ್ನಾಗಿಸಿಕೊಂಡಿರುವುದರ ಬಗ್ಗೆ ಯಾರು ಮಾತನಾಡುವಂತಿಲ್ಲ. ಇನ್ನೂ ಬೆರೆಳೆಣಿಕೆಯ ಚಿತ್ರಗಳಲ್ಲಿ ಅಭಿನಯಿಸಿರುವ ದೇವರಕೊಂಡ, ಉಡಾಫೆಯ ಮಾತುಗಳನ್ನಾಡಿ ತಾನೂ ಒಬ್ಬ ‘ಎಳಸಲುಸ್ಟಾರ್’ ಎಂಬುದನ್ನು ಮತ್ತೆ ಮತ್ತೆ ನಿರೂಪಿಸುವ ಅಗತ್ಯವಿಲ್ಲವೇನೋ.. ಅಲ್ಲವೇ.
ಇನ್ನು, ಕಿರಿಕ್‍ರಾಣಿ ರಶ್ಮಿಕಾ ಕಮ್ಮಿಯೇನಿಲ್ಲ. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ಸಾಕಷ್ಟು ತಯಾರಿ ಮಾಡಿಕೊಂಡು ಬರದಿದ್ದರೂ ಪ್ರಶ್ನೆಗಳಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂಬುವುದನ್ನು ಪ್ರಾಕ್ಟೀಸ್ ಮಾಡಿದಂತಿತ್ತು. ರಕ್ಷಿತ್&ರಶ್ಮಿಕಾ ಸಂಬಂಧದ ಬಗ್ಗೆ ಪ್ರಶ್ನೆ ಪಾಪ ರಶ್ಮಿಕಾಗೆ ಅರ್ಥವೇ ಆಗಲಿಲ್ಲವಂತೆ. ಆಕೆ ನೀಡಬೇಕಾದ ಉತ್ತರವನ್ನು ಆಕೆಯ ಪರವಾಗಿ ಲಿಪ್‍ಲಾಕ್ ಹಿರೋನೇ ಹೇಳಬೇಕಾಯಿತು. ಅತನ ಉತ್ತರ ಇಷ್ಟೇ ‘ಪರ್ಸನಲ್ ವಿಷ್ಯದ ಬಗ್ಗೆ ಮಾತನಾಡೋದು ಬೇಡ’. ಅಲ್ಲಿಗೆ, ವಿಜಯ್&ರಶ್ಮಿಕಾ ಮಿಡಿಯಾ ಮುಂದೆ ಬರುವ ಮೊದಲು ಸಾಕಷ್ಟು ರಿಹರ್ಸಲ್ ಮಾಡಿಕೊಂಡು ಬಂದಿದ್ದು ಕ್ಲಿಯರ್ ಆಗಿತ್ತು. ಒಟ್ಟಿನಲ್ಲಿ, ರಶ್ಮಿಕಾರ ಪರ್ಸ್‍ನಲ್ ಸಂಗತಿ, ವಿಜಯ್‍ಗೂ ಪರ್ಸನಲ್ ಆಗಿರೋದು ಒಂದು ಉತ್ತಮ ಬೆಳವಣಿಗೆ!

Be the first to comment

Leave a Reply

Your email address will not be published. Required fields are marked *

Translate »
error: Content is protected !!