9 ಮಿಲಿಯನ್‌ ವ್ಯೂವ್ಸ್ ಪಡೆದ ದೇವರ ಟ್ರೈಲರ್!

ಜ್ಯೂನಿಯರ್‌ ಎನ್‌ಟಿಆರ್‌, ಜಾನ್ವಿ ಕಪೂರ್‌ ಅಭಿನಯದ ಬಹುನಿರೀಕ್ಷಿತ ‘ದೇವರ’ ಟ್ರೇಲರ್‌ ಬಿಡುಗಡೆ ಆಗಿ 9 ಮಿಲಿಯನ್‌ಗೂ ಹೆಚ್ಚು ವ್ಯೂವ್ಸ್‌ ಪಡೆದುಕೊಂಡಿದೆ!

ಮಂಗಳವಾರ ಸಂಜೆ 5 ಗಂಟೆಗೆ ಚಿತ್ರತಂಡ ಟ್ರೇಲರ್‌ ಬಿಡುಗಡೆ ಮಾಡಿದೆ. ಮುಂಬೈನಲ್ಲಿ ನಡೆದ ಟ್ರೇಲರ್‌ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಬಹುತೇಕ ಎಲ್ಲಾ ಸದಸ್ಯರು ಹಾಜರಿದ್ದರು. ಟ್ರೇಲರ್‌ ಬಿಡುಗಡೆ ಜೊತೆಗೆ ಸಿನಿಮಾ ತಂಡ ಅಧಿಕೃತವಾಗಿ ಪ್ರಚಾರ ಕಾರ್ಯ ಆರಂಭಿಸಿದೆ.

ಸಿನಿಮಾ ಇದೇ ತಿಂಗಳು ಬಿಡುಗಡೆ ಆಗುತ್ತಿದ್ದು ಈಗಾಗಲೇ ಪ್ರೀ ಬುಕ್ಕಿಂಗ್‌  ಆರಂಭವಾಗಿದೆ. ರಿಲೀಸ್‌ ನಂತರ ಈ ಚಿತ್ರ ಆರ್‌ಆರ್‌ಆರ್‌ ಚಿತ್ರದ ದಾಖಲೆ  ಮುರಿಯಬಹುದು ಎಂಬ ಮಾತು ಕೇಳಿಬರುತ್ತಿದೆ.

ದೇವರ ಸಿನಿಮಾ 2 ಭಾಗಗಳಾಗಿ ತಯಾರಾಗುತ್ತಿದೆ. ಮೊದಲ ಭಾಗ ಸೆಪ್ಟೆಂಬರ್‌ 27 ರಂದು ತೆರೆ ಕಾಣುತ್ತಿದೆ. ಚಿತ್ರವನ್ನು ಯುವಸುಧಾ ಆರ್ಟ್ಸ್‌, ಎನ್‌ಟಿಆರ್‌ ಆರ್ಟ್ಸ್‌ ಬ್ಯಾನರ್‌ ಅಡಿ, ಸುಧಾಕರ್‌ ಮಿಕ್ಕಿಲಿನೇನಿ, ಕೋಸರಾಜು ಹರಿಕೃಷ್ಣ , ನಂದಮುರಿ ಕಲ್ಯಾಣ್‌ ರಾಮ್‌ ಜೊತೆ ಸೇರಿ ನಿರ್ಮಿಸಿದ್ದಾರೆ. ಕೊರಟಾಲ ಶಿವ, ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಅನಿರುದ್ಧ್‌ ರವಿಚಂದರ್‌ ಸಂಗೀತ ನೀಡಿದ್ದಾರೆ.

ಜ್ಯೂ ಎನ್‌ಟಿಆರ್‌, ಸೈಫ್‌ ಅಲಿ ಖಾನ್‌, ಜಾನ್ವಿ ಕಪೂರ್‌ ಜೊತೆಗೆ ಚಿತ್ರದಲ್ಲಿ ಪ್ರಕಾಶ್‌ ರಾಜ್‌, ಶ್ರೀಕಾಂತ್‌, ಮುರಳಿ ಶರ್ಮಾ ಹಾಗೂ ಇನ್ನಿತರರು ನಟಿಸಿದ್ದಾರೆ. ಕರ್ನಾಟಕದಲ್ಲಿ ಕೆವಿಎನ್‌ ಪ್ರೊಡಕ್ಷನ್ಸ್‌  ಸಿನಿಮಾವನ್ನು ಹಂಚಿಕೆ ಮಾಡುತ್ತಿದೆ. ಚಿತ್ರದಲ್ಲಿ ಜಾನ್ವಿ ಕಪೂರ್‌ ಹಳ್ಳಿ ಹುಡುಗಿಯಾಗಿ, ಸೈಫ್‌ ಅಲಿ ಖಾನ್‌ ಖಳನಾಯಕನಾಗಿ ನಟಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!