ಡೆಮೊ ಪೀಸ್ ಚಿತ್ರದ ಚಿತ್ರೀಕರಣ ಪೂರ್ಣ

ನಿಧಿ ಸಂದೇಶ್ ಅರ್ಪಿಸುವ, ಡಿಚಿಥಿ ಖಾ ಮೂವೀಸ್ ಲಾಂಛನದಲ್ಲಿ ಶ್ರೀಮತಿ ಸ್ಪರ್ಶ ರೇಖ ಅವರು ನಿರ್ಮಿಸುತ್ತಿರುವ ‘ಡೆಮೊ ಪೀಸ್’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ ರೀರೆಕಾರ್ಡಿಂಗ್ ನಡೆಯುತ್ತಿದೆ. ಬೆಂಗಳೂರು, ದಾಂಡೇಲಿ, ತುಮಕೂರಿನಲ್ಲಿ ಚಿತ್ರೀಕರಣವಾಗಿದೆ.

ಹಲವು ನಿರ್ದೇಶಕರ ಬಳಿ ಸಹಾಯಕರಾಗಿ ದುಡಿದಿರುವ ವಿವೇಕ್ ಮೊದಲ ಬಾರಿ ಬರೆದು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶಕರು ಯುವಕರಾಗಿದ್ದರಿಂದ ಪ್ರಚಲಿತ ಕಾಲದ ಹರೆಯದ ಹುಡುಗ-ಹುಡುಗಿಯರ ಮನಸ್ಥಿತಿಯನ್ನು ಅರಿತುಕೊಂಡು ಅದಕ್ಕೆ ತಕ್ಕಂತೆ ಕತೆಯನ್ನು ಹಣೆದಿರುವುದು ವಿಶೇಷವಾಗಿದೆ.
ಅರ್ಜುನ್ ರಾಂ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಬಾಲ ಸರಸ್ವತಿ ಅವರ ಛಾಯಾಗ್ರಹಣವಿದೆ. ಯು.ಡಿ.ವೆಂಕಿ ಸಂಕಲನ, ಮದನ್ ಹರಿಣಿ ನೃತ್ಯ ನಿರ್ದೇಶನ ಹಾಗೂ ವಿಕ್ರಂ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ

‘ಬ್ರಹ್ಮಗಂಟು` ಧಾರಾವಾಹಿ ಖ್ಯಾತಿಯ ಭರತ್ ಅವರು ನಾಯಕಾನಾಗಿ ನಟಿಸಿರುವ ಈ ಚಿತ್ರದಲ್ಲಿ ಸೋನಾಲ್ ಮಾಂಟೆರೊ ನಾಯಕಿಯಾಗಿ ಅಭಿನಯಿಸಿದ್ದಾರೆ. ಸ್ಪರ್ಶ ರೇಖ, ಶ್ರೀಕಾಂತ್ ಹೆಬ್ಳೀಕರ್, ರೂಪೇಶ್, ಚಂದ್ರಚೂಡ್, ರೋಹಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!