ಪುಷ್ಪ 2 ಓಟಿಟಿ ರೈಟ್ಸ್ ಗೆ ಡಿಮಾಂಡ್

ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಚಿತ್ರದ ಶೂಟಿಂಗ್ ಶೀಘ್ರವೇ ಆರಂಭವಾಗಲಿದ್ದು ಚಿತ್ರ ಆರಂಭಕ್ಕೂ ಮುನ್ನ ಓಟಿಟಿ ರೈಟ್ಸ್ ಗಾಗಿ ಭರ್ಜರಿ ಪೈಪೋಟಿ ಶುರುವಾಗಿದೆ.

ಸಿನಿಮಾದ ರೈಟ್ಸ್ ಗಾಗಿ ಓಟಿಟಿ ಸಂಸ್ಥೆಯೊಂದು ಭರ್ಜರಿ ಆಫರ್ ನೀಡಿದೆ ಎನ್ನಲಾಗುತ್ತಿದೆ. ಶೂಟಿಂಗ್ ಶುರುವಾಗುವ ಮುನ್ನವೇ ಇಂಥದ್ದೊಂದು ಆಫರ್ ನೋಡಿ ಚಿತ್ರರಂಗ ಬೆಚ್ಚಿಬಿದ್ದಿದೆ.

ಸುಕುಮಾರನ್ ನಿರ್ದೇಶನದ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರ ರಕ್ತ ಚಂದನ ಕಳ್ಳಸಾಗಣೆ ಕುರಿತು ಕಥಾ ವಸ್ತು ಹೊಂದಿತ್ತು. ಅಲ್ಲು ಅರ್ಜುನ್ ಈ ಚಿತ್ರದಲ್ಲಿ ರಕ್ತ ಚಂದನ ಸಾಗಣೆ ಮಾಡುವ ಲಾರಿ ಡ್ರೈವರ್ ಆಗಿ ಕಾಣಿಸಿಕೊಂಡಿದ್ದರು. ಪುಷ್ಪ ಸಿನಿಮಾದ ನೋಡಿದ ಅಭಿಮಾನಿಗಳು ಪುಷ್ಪ 2 ಚಿತ್ರ ನೋಡಲು ಕಾದು ಕೂತಿದ್ದಾರೆ.

ಆಗಸ್ಟ್ ತಿಂಗಳಿನಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದೆ ಎಂದು ಹೇಳಲಾಗಿದೆ. ಈ ಮಧ್ಯೆ ಚಿತ್ರದ ಓಟಿಟಿ ರೈಟ್ಸ್‌ಗಾಗಿ ಪುಷ್ಪ ಚಿತ್ರತಂಡದ ಹಿಂದೆ ಕೆಲ ಓಟಿಟಿ ಸಂಸ್ಥೆಗಳು ಹಿಂದೆ ಬಿದ್ದಿವೆ. ಇದು ಪುಷ್ಪ 2 ಚಿತ್ರಕ್ಕೆ ಉತ್ತಮ ಆರಂಭ ನೀಡಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಪಂಚ ಭಾಷೆಗಳಲ್ಲಿ ನಟಿಸಿ ರಾಷ್ಟ್ರಪ್ರಶಸ್ತಿ ಪಡೆದಿರುವ ನಟಿ ಪ್ರಿಯಾ ಮಣಿ ಅವರು ಪುಷ್ಪ 2 ಸಿನಿಮಾ ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸಲು ಪ್ರಿಯಾಮಣಿಗೆ ಆಫರ್ ನೀಡಲಾಗಿದೆ ಎಂಬ ಸುದ್ದಿ ಕೇಳಿ ಬಂದಿದೆ. ಆದರೆ ಇದನ್ನು ಚಿತ್ರತಂಡ ಖಚಿತ ಪಡಿಸಿಲ್ಲ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!