ಲಕ್ಕಿ ಮ್ಯಾನ್ ಪ್ರೀಮಿಯರ್ ಶೋಗೆ ಡಿಮ್ಯಾಂಡ್

‘ಪವರ್ ಸ್ಟಾರ್​’ ಪುನೀತ್​ ರಾಜ್​ಕುಮಾರ್ ನಟನೆಯ ‘ಲಕ್ಕಿ ಮ್ಯಾನ್​’ ಸಿನಿಮಾ ಸೆಪ್ಟೆಂಬರ್​ 8ರಂದು ಅನೇಕ ಕಡೆಗಳಲ್ಲಿ ಪೇಯ್ಡ್​ ಪ್ರೀಮಿಯರ್​ಗೆ​ ವ್ಯವಸ್ಥೆ ಮಾಡಲಾಗುತ್ತಿದ್ದು, ಆ ಶೋಗಳ ಟಿಕೆಟ್​ಗಳು ಸೋಲ್ಡ್​ ಔಟ್​ ಆಗುತ್ತಿವೆ.

ಸೆಪ್ಟೆಂಬರ್​ 8ರಂದು ಅನೇಕ ಕಡೆಗಳಲ್ಲಿ ಪ್ರೀಮಿಯರ್​ ಪ್ರದರ್ಶನ ನಡೆಯುತ್ತಿದೆ. ಅದರ ಟಿಕೆಟ್​ಗಳ ಮುಂಗಡ ಬುಕಿಂಗ್​ಗೆ ಅವಕಾಶ ನೀಡಲಾಗಿದೆ. ಈಗಾಗಲೇ ಅನೇಕ ಕಡೆಗಳಲ್ಲಿ ಟಿಕೆಟ್​ಗಳು ಸೋಲ್ಡ್​ ಔಟ್​ ಆಗಿವೆ. ಬೆಂಗಳೂರಿನ ಅನೇಕ ಮಲ್ಟಿಪ್ಲೆಕ್ಸ್​ನಲ್ಲಿ ಸಂಜೆ 6 ಗಂಟೆ ನಂತರ ಪ್ರೀಮಿಯರ್​ ಪ್ರದರ್ಶನ ನಡೆಯಲಿದೆ.

ಸೆಪ್ಟೆಂಬರ್ 9ರಂದು ‘ಲಕ್ಕಿ ಮ್ಯಾನ್’ ರಿಲೀಸ್ ಆಗಲಿದೆ. ಅಪ್ಪು ಜೊತೆ ಈ ಸಿನಿಮಾದಲ್ಲಿ ಡಾರ್ಲಿಂಗ್​ ಕೃಷ್ಣ, ಪ್ರಭುದೇವ, ಸಂಗೀತಾ ಶೃಂಗೇರಿ, ರೋಷಿನಿ ಪ್ರಕಾಶ್​ ಮುಂತಾದವರು ನಟಿಸಿದ್ದಾರೆ.

ಪ್ರಭುದೇವ ಅವರ ಸಹೋದರ ಎಸ್​. ನಾಗೇಂದ್ರ ಪ್ರಸಾದ್​ ಅವರು ‘ಲಕ್ಕಿ ಮ್ಯಾನ್​’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಪುನೀತ್​ ರಾಜ್​ಕುಮಾರ್​ ಅವರಿಗೆ ದೇವರ ಪಾತ್ರವಿದೆ. ದೇವರ ಪಾತ್ರದಲ್ಲಿಯೇ ಪುನೀತ್ ಅವರನ್ನು ತೆರೆಮೇಲೆ ನೋಡಲು ಫ್ಯಾನ್ಸ್​ ಕಾಯುತ್ತಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್​ ಗಮನ ಸೆಳೆಯುತ್ತಿದೆ.

ಹೃದಯಾಘಾತದಿಂದ ನಿಧನರಾಗುವುದಕ್ಕೂ ಮುನ್ನ ಪುನೀತ್ ರಾಜ್​ಕುಮಾರ್​ ಅವರು ‘ಲಕ್ಕಿ ಮ್ಯಾನ್ ‘ ಸಿನಿಮಾದಲ್ಲಿ ನಟಿಸಿದ್ದರು. ಚಿತ್ರ ವೀಕ್ಷಣೆಗೆ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!