ಪಾಕಿಸ್ತಾನದಲ್ಲಿ ಭಾರತೀಯ ಸಿನಿಮಾಗಳ ಮೇಲೆ ನಿಷೇಧ ಇದ್ದರೂ ‘ಧುರಂಧರ್’ ಸಿನಿಮಾದ ಪೈರಸಿ ಕಾಪಿಗಳನ್ನು ಅಲ್ಲಿ ಜನ ಮುಗಿಬಿದ್ದು ಖರೀದಿಸಿ ನೋಡುತ್ತಿದ್ದಾರೆ.
ಟ್ರಾವೆಲ್ ವ್ಲಾಗರ್ ಕರ್ಲ್ ರಾಕ್, ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. ಈ ಹಿಂದೆ ಭಾರತಕ್ಕೂ ಭೇಟಿ ನೀಡಿದ್ದ ರಾಕ್ ಇದೀಗ ಪಾಕಿಸ್ತಾನದ ಪ್ರವಾಸದಲ್ಲಿದ್ದು ಕರಾಚಿ ನಗರದ ಮಾರುಕಟ್ಟೆಯಲ್ಲಿ ‘ಧುರಂಧರ್’ ಸಿನಿಮಾದ ಡಿವಿಡಿ ಮಾರುತ್ತಿರುವುದು ನೋಡಿ ಶಾಕ್ ಆಗಿದ್ದಾರೆ. ಸಿನಿಮಾದ ಡಿವಿಡಿ ಮಾರಾಟದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಪಾಕಿಸ್ತಾನದ ಮಾರುಕಟ್ಟೆಗಳಲ್ಲಿ ‘ಧುರಂಧರ್’ ಸಿನಿಮಾದ ಡಿವಿಡಿಗಳು 50 ಪಾಕಿಸ್ತಾನಿ ರೂಪಾಯಿಗೆ ಮಾರಾಟವಾಗುತ್ತಿವೆ. ಡಿವಿಡಿ ಅಂಗಡಿಗಳವರು ‘ಧುರಂಧರ್’ ಸಿನಿಮಾದ ಪೋಸ್ಟರ್ಗಳನ್ನು ದೊಡ್ಡದಾಗಿ ಹಾಕಿಸಿಕೊಂಡಿದ್ದಾರೆ.
‘ಧುರಂಧರ್’ ಸಿನಿಮಾದಲ್ಲಿ ಪಾಕಿಸ್ತಾನ ವಿರೋಧಿ ಕಥಾವಸ್ತುವಿದ್ದರೂ ಅಲ್ಲಿನ ಜನರು ಮುಗಿಬಿದ್ದು ನೋಡುತ್ತಿರುವುದು ಚರ್ಚೆಗೆ ಕಾರಣವಾಗಿದೆ. ‘ಧುರಂಧರ್’ ಸಿನಿಮಾದ ಹಾಡುಗಳು ಪಾಕಿಸ್ತಾನದಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದು, ಅಲ್ಲಿನ ಮದುವೆ ಸಮಾರಂಭ, ಇತರೆ ಸಮಾಂಭಗಳಲ್ಲಿ ಹಾಡುಗಳನ್ನು ಹಾಕಿಕೊಂಡು ಜನ ಡ್ಯಾನ್ಸ್ ಮಾಡುತ್ತಿದ್ದಾರೆ.
‘ಧುರಂಧರ್’ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದೆ. ಒಟಿಟಿಯಲ್ಲಿ ಬಿಡುಗಡೆ ಆದ ಬಳಿಕವೂ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಲೇ ಇದೆ. ಭಾರತೀಯ ಸೈನಿಕ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಭಯೋತ್ಪಾದಕರೊಟ್ಟಿಗೆ ಸೇರಿ ಅವರ ಮೇಲೆ ಗೂಢಚಾರಿಕೆ ಮಾಡುವ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾದ ಆಕ್ಷನ್, ಹಾಡುಗಳು, ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ.
‘ಧುರಂಧರ್’ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಇದರ ಮುಂದುವರಿದ ಭಾಗ ‘ಧುರಂಧರ್ 2’ 2026ರ ಮಾರ್ಚ್ 19ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ.

—–





Be the first to comment