ಕನ್ನಡದಲ್ಲಿ ರಿಲೀಸ್ ಆಗುತ್ತಿದೆ ದೀಪಿಕಾ ಚಿತ್ರ

ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ನಟಿಸಿರುವ 83 ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗಲಿದೆ.

15 ವರ್ಷಗಳ ಹಿಂದೆ ಇಂದ್ರಜಿತ್ ಲಂಕೇಶ್ ನಿರ್ದೇಶಿಸಿದ್ದ ‘ಐಶ್ವರ್ಯ’ ಸಿನಿಮಾ ದೀಪಿಕಾ ನಟಿಸಿದ ಕನ್ನಡದ ಮೊದಲ ಹಾಗೂ ಕೊನೆಯ ಸಿನಿಮಾ ಆಗಿತ್ತು. ಈಗ ದೀಪಿಕಾ ನಟನೆಯ 83 ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗುತ್ತಿದ್ದು, ಬಿಡುಗಡೆಗೆ ತಯಾರಿ ನಡೆದಿದೆ.

ಕಪಿಲ್ ದೇವ್ ನಾಯಕತ್ವದ ಭಾರತದ ಕ್ರಿಕೆಟ್ ತಂಡ 1983ರಲ್ಲಿ ಮೊದಲ ವಿಶ್ವಕಪ್ ಗೆದ್ದು ಕೊಡುವಲ್ಲಿ ಯಶಸ್ವಿಯಾಗಿತ್ತು. ಆ ಕ್ಷಣಗಳನ್ನು 83 ಸಿನಿಮಾ ತೆರೆಮೇಲೆ ಕಟ್ಟಿಕೊಡಲಿದೆ. ಈ ಸಿನಿಮಾದ ಮೊದಲ ಟೀಸರ್ ಈಗಾಗಲೇ ರಿಲೀಸ್ ಆಗಿದೆ. ಈ ಸಿನಿಮಾ ಕನ್ನಡದಲ್ಲೂ ಡಬ್ ಆಗಿ ಬಿಡುಗಡೆಯಾಗಲಿದೆ. ಈ ಮೂಲಕ 15 ವರ್ಷದ ಬಳಿಕ ಕನ್ನಡದಲ್ಲಿ ಮತ್ತೆ ದೀಪಿಕಾ ಪಡುಕೋಣೆ ಸಿನಿಮಾ ನೋಡುವ ಅವಕಾಶ ಸಿಗಲಿದೆ.

’83’ ಸಿನಿಮಾಸ್ ಕಳೆದ ವರ್ಷ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಈ ಸಿನಿಮಾ ಬಿಡುಗಡೆ ವಿಳಂಬ ಆಗಿದೆ. ಡಿಸೆಂಬರ್ 24ಕ್ಕೆ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರದ ಮೊದಲ ಟ್ರೈಲರ್ ನವೆಂಬರ್ 30ರಂದು ರಿಲೀಸ್ ಆಗಲಿದೆ.

ಕಬೀರ್ ಖಾನ್ ನಿರ್ದೇಶಿಸಿರುವ ’83’ ಚಿತ್ರ ಬಾಲಿವುಡ್‌ನ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು ಆಗಿದೆ. ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ಮದುವೆ ಆದ ಬಳಿಕ ಜೊತೆಯಾಗಿ ನಟಿಸಿದ ಮೊದಲ ಸಿನಿಮಾ ಇದಾಗಿದೆ. ರಣ್‌ವೀರ್ ಸಿಂಗ್ ಅವರು ಕಪಿಲ್ ದೇವ್ ಪಾತ್ರದಲ್ಲಿ ನಟಿಸುತ್ತಿರುವುದು ನಿರೀಕ್ಷೆ ಹುಟ್ಟಿಸಿದೆ. ಈ ಚಿತ್ರ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಕನ್ನಡ ಸಿನಿಮಾದಿಂದ ನಟನೆ ಆರಂಭಿಸಿದ್ದ ದೀಪಿಕಾ ಪಡುಕೋಣೆ ಈಗ ಮತ್ತೆ ಕನ್ನಡದ ಡಬ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!