ಅಮೆರಿಕದಲ್ಲಿ ನಡೆಯುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇಂದು ಮುಂಬೈನಿಂದ ಲಾಸ್ ಏಂಜಲೀಸ್ಗೆ ಪ್ರಯಾಣಿಸಿದರು.
ಪ್ರತಿಷ್ಟಿತ ಪ್ರಶಸ್ತಿಯ ಪ್ರೆಸೆಂಟರ್ ಆಗಿ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಕ್ಯಾಮರಾ ಕಣ್ಣಿನಲ್ಲಿ ‘ಬಾಲಿವುಡ್ ಮಸ್ತಾನಿ’ ಸೆರೆಯಾಗಿದ್ದು, ಎಂದಿನಂತೆ ಸಿಂಪಲ್ ಕ್ಯಾಶುವಲ್ ಲುಕ್ನಲ್ಲಿ ಕಾಣಿಸಿಕೊಂಡರು. ಪತಿ, ನಟ ರಣ್ವೀರ್ ಸಿಂಗ್ ಬೀಳ್ಕೊಡಲು ಏರ್ಪೋರ್ಟ್ಗೆ ಆಗಮಿಸಿದ್ದರು.
ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಆಸ್ಕರ್ ವೇದಿಕೆ ಮೇಲೇರಲಿದ್ದಾರೆ. ಈ ಸಾಲಿನ ಆಸ್ಕರ್ ಸಮಾರಂಭದಲ್ಲಿ ಹಲವು ಪ್ರಸಿದ್ಧ ವ್ಯಕ್ತಿಗಳು ಇರಲಿದ್ದಾರೆ.
ಎಸ್.ಎಸ್.ರಾಜಮೌಳಿ ಮತ್ತು ಆರ್‌ಆರ್‌ಆರ್ ಚಿತ್ರತಂಡ ಕೂಡ ಪ್ರಶಸ್ತಿ ಕಾರ್ಯಕ್ರಮಕ್ಕೆ ಹಾಜರಾಗಲು ಸಜ್ಜಾಗಿದೆ. ಆಸ್ಕರ್‌ಗೆ ನಾಮನಿರ್ದೇಶನಗೊಂಡ ನಾಟು ನಾಟು ಹಾಡಿನ ಲೈವ್ ಪ್ರದರ್ಶನ ಕೂಡ ಇರಲಿದೆ.
___

Be the first to comment