ಪ್ರಭಾಸ್ ನಟನೆಯ ಬಿಗ್ ಬಜೆಟ್ ಸಿನಿಮಾ ‘ಕಲ್ಕಿ 2898 ಎಡಿ’ ಸೀಕ್ವೆಲ್‌ನಿಂದ ದೀಪಿಕಾ ಪಡುಕೋಣೆಯನ್ನು ಕೈಬಿಡಲಾಗಿದೆ.
ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ಟ್ವೀಟ್ ಮಾಡಿ “ಎಲ್ಲ ಅಂಶಗಳನ್ನು ಪರಿಶೀಲಿಸಿದ ನಂತರ ದೀಪಿಕಾ ಪಡುಕೋಣೆಯ ಜೊತೆ ಬೇರೆಯಾಗಲು ನಿರ್ಧರಿಸಿದ್ದೇವೆ. ಕಲ್ಕಿ 2898 ಎಡಿ’ ಸಿನಿಮಾವು ಹೆಚ್ಚಿನ ಶ್ರಮ, ಶ್ರದ್ಧೆಯನ್ನು ಬೇಡುತ್ತದೆ. ದೀಪಿಕಾ ಅವರ ಭವಿಷ್ಯದ ಸಿನಿಮಾಗಳಿಗೆ ಒಳಿತು ಬಯಸುತ್ತೇವೆ” ಎಂದು ತಿಳಿಸಿದೆ.
ದೀಪಿಕಾ ಪಡುಕೋಣೆಯ 8 ಗಂಟೆ ಕೆಲಸದ ಷರತ್ತನ್ನು ಒಪ್ಪಲು ಸಾಧ್ಯವಾಗದೆ ಸಿನಿಮಾದಿಂದ ಕೈಬಿಡುವ ನಿರ್ಧಾರವನ್ನು ವೈಜಯಂತಿ ಮೂವೀಸ್ ಮಾಡಿದೆ. ನಟಿ ದೀಪಿಕಾಗೆ ಬದ್ಧತೆಯ ಕೊರತೆ ಇದೆ. ಅದರಿಂದಲೇ ದೀಪಿಕಾರನ್ನು ಸಿನಿಮಾದಿಂದ ಕೈಬಿಟ್ಟಿದ್ದೇವೆ ಎಂದು ನಿರ್ಮಾಣ ಸಂಸ್ಥೆ ಪರೋಕ್ಷವಾಗಿ ಹೇಳಿದೆ.
ದೀಪಿಕಾ ಪಡುಕೋಣೆ, ತಾಯಿ ಆದ ಬಳಿಕ ಕೆಲಸದ ನಿಯಮಗಳಲ್ಲಿ ಭಾರೀ ಬದಲಾವಣೆ ತಂದಿದ್ದಾರೆ. ಇದೇ ಕಾರಣಕ್ಕೆ ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾ ಕಳೆದುಕೊಂಡಿದ್ದರು. ದಿನಕ್ಕೆ ಕೇವಲ ಎಂಟು ಗಂಟೆಗಳಷ್ಟೇ ಕೆಲಸ ಮಾಡುವ ಷರತ್ತು ಹಾಕಿದ್ದರಿಂದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, ದೀಪಿಕಾ ಬದಲಿಗೆ ತೃಪ್ತಿ ದಿಮ್ರಿಯನ್ನು ಆಯ್ಕೆ ಮಾಡಿಕೊಂಡರು.
ಇದೀಗ ‘ಕಲ್ಕಿ 2898 ಎಡಿ’ ಸಿನಿಮಾದಿಂದಲೂ ದೀಪಿಕಾ ಪಡುಕೋಣೆ ಔಟ್ ಆಗಿದ್ದಾರೆ.
—





Be the first to comment