Deepika das: ಪಾಯಲ್ ಆಗಿ ಬರಲಿದ್ದಾರೆ ದೀಪಿಕಾ ದಾಸ್

ಬಿಗ್​ಬಾಸ್ ನಟಿ ದೀಪಿಕಾ ದಾಸ್ ಅವರು ಬರ್ತ್​ಡೇ ದಿನ ಗುಡ್​ನ್ಯೂಸ್ ಕೊಟ್ಟಿದ್ದು ತಮ್ಮ ಮುಂದಿನ ಸಿನಿಮಾದ ಹಿಂಟ್ ಕೊಟ್ಟಿದ್ದಾರೆ.

ಸಿನಿಮಾದಲ್ಲಿ ತಮ್ಮ ಪಾತ್ರವನ್ನು ಪರಿಚಯಿಸಿದ್ದಾರೆ. ಇದರಲ್ಲಿ ದೀಪಿಕಾ ದಾಸ್ ಅವರು ಪಾಯಲ್ ಆಗಿ ಕಾಣಿಸಿಕೊಂಡಿದ್ದಾರೆ. ಟ್ರಾವೆಲ್ ಗರ್ಲ್ ಲುಕ್​ನಲ್ಲಿರುವ ದೀಪಿಕಾ ಅವರನ್ನು ನೋಡಿ ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ.

ದೀಪಿಕಾ ದಾಸ್ ಜಾಕೆಟ್ ಧರಿಸಿ, ಕೈಗೆ ಗ್ಲೌಸ್ ಗಳನ್ನು ಹಾಕಿ ಕ್ಯಾಪ್ ಧರಿಸಿ, ಟ್ರಾವೆಲ್ ಬ್ಯಾಗ್ ಹೊತ್ತುಕೊಂಡು ಪೋಸ್ ಕೊಟ್ಟಿದ್ದಾರೆ.

ಬೆಟ್ಟದ ತಪ್ಪಲಿನಲ್ಲಿ ಕ್ಯಾಂಪ್ ಫೈರ್ ಮಾಡಿ ಅದರ ಪಕ್ಕದಲ್ಲಿ ಬೈಕ್​ಗೆ ಒರಗಿ ಕುಳಿತಿದ್ದನ್ನು ಕಾಣಬಹುದು. ದೂರದಲ್ಲಿ ಹಿಮ ಪರ್ವವನ್ನೂ ಕಾಣಬಹುದು. ದೀಪಿಕಾ ದಾಸ್ ಕ್ಯಾಂಪ್ ಫೈರ್ ಮುಂದೆ ಒಂಟಿಯಾಗಿ ಕುಳಿತಿರುವ ದೃಶ್ಯ ಇದೆ.

ಸಿನಿಮಾದ ಟೈಟಲ್ ಲಾಂಚ್ ಇನ್ನಷ್ಟೇ ನಡೆಯಬೇಕಿದೆ. ಈಗ ನಟಿಯ ಪಾತ್ರವನ್ನು ಮಾತ್ರ ಪರಿಚಯಿಸಲಾಗಿದೆ.

ಒಂದು ಕಥೆ ನೋವಿನ ಅನುಭವದೊಂದಿಗೆ ಆರಂಭವಾಗಬಹುದು. ಆದರೆ ಕೊನೆ ಮಾತ್ರ ಚೆನ್ನಾಗಿರುತ್ತದೆ. ಸಾಹಸಮಯವಾಗಿರುತ್ತದೆ ಎಂದಿದ್ದಾರೆ ದೀಪಿಕಾ ದಾಸ್.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!