ಮತ್ತೊಮ್ಮೆ ಡೀಪ್‌ಫೇಕ್‌ಗೆ ರಶ್ಮಿಕಾ ಬಲಿ!

ಟಿ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಡೀಪ್ ಫೇಕ್ ವಿಡಿಯೋಗೆ ಬಲಿಯಾಗಿದ್ದಾರೆ.

ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ ಮುಖವನ್ನು ಮಾಡೆಲ್‌ನ ಮುಖದೊಂದಿಗೆ ಎಐ ಸಹಾಯದಿಂದ ಸಂಯೋಜಿಸಲಾಗಿದೆ.  ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ವೈರಲ್ ಆಗುತ್ತಿದ್ದು, ಎಐ ಬಳಸಿ ವಿಡಿಯೋ ಮಾರ್ಫಿಂಗ್ ಮಾಡಲಾಗಿದೆ. ವಿಡಿಯೋ ವೈರಲ್ ಆದ ನಂತರ ನಟಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

2024ರ ಏಪ್ರಿಲ್ ನಲ್ಲಿ ಕೊಲಂಬಿಯಾದ ಮಾಡೆಲ್ ಮತ್ತು ಕಂಟೆಂಟ್ ಕ್ರಿಯೇಟರ್ ಡೇನಿಯೆಲಾ ವಿಲ್ಲಾರ್ರಿಯಲ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದರು. ಇದರಲ್ಲಿ ಅವರು ಸ್ಟ್ರಾಪ್‌ಲೆಸ್ ಬಿಕಿನಿಯಲ್ಲಿ ಜಲಪಾತದ ಬಳಿ ಪೋಸ್ ನೀಡಿದ್ದರು. ಕೆಲ ದಿನಗಳ ಹಿಂದೆ ಎಐ ಸಹಾಯದಿಂದ ಮಾಡೆಲ್‌ ಮುಖವನ್ನು ರಶ್ಮಿಕಾ ಅವರ ಮುಖದೊಂದಿಗೆ ಬದಲಾಯಿಸಲಾಗಿದ್ದು ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ರಶ್ಮಿಕಾ ಅವರ ಇದೇ ರೀತಿಯ ವೀಡಿಯೊ ವೈರಲ್ ಆಗಿತ್ತು. ಆ ವಿಡಿಯೋ ಕೂಡ ಎಐ ಸಹಾಯದಿಂದ ಮಾರ್ಫಿಂಗ್ ಮಾಡಿ ಮಾಡಲಾಗಿತ್ತು. ವೈರಲ್ ವೀಡಿಯೊದಲ್ಲಿ ಬ್ರಿಟನ್ ಮೂಲದ ಜಾರಾ ಪಟೇಲ್ ಅವರ ದೇಹದ ಮೇಲೆ ರಶ್ಮಿಕಾ ಅವರ ಮುಖವನ್ನು ಅಳವಡಿಸಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಚಿತ್ರದಲ್ಲಿ ರಶ್ಮಿಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ  ಆಗಸ್ಟ್ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!