ಚಿತ್ರ: ದಿ
ನಿರ್ದೇಶನ: ವಿನಯ್ ವಾಸುದೇವ್
ನಿರ್ಮಾಣ: ವಿ ಡಿ ಕೆ ಗ್ರೂಪ್ಸ್
ತಾರಾ ಬಳಗ: ವಿನಯ್ ವಾಸುದೇವ್, ದಿಶಾ ರಮೇಶ್, ಬಲರಾಜ ವಾಡಿ, ಹರಿಣಿ ಇತರರು
ರೇಟಿಂಗ್: 3.5
ಕಾಡಿಗೆ ಚಾರಣಕ್ಕೆ ಹೋದ ಸಂದರ್ಭದಲ್ಲಿ ಉಂಟಾಗುವ ರೋಚಕ ಪಯಣವನ್ನು ತೆರೆಯ ಮೇಲೆ ತಂದಿಡುವ ಚಿತ್ರ ಈ ವಾರ ಬಿಡುಗಡೆ ಆಗಿರುವ ‘ದಿ’ ಸಿನಿಮಾ.
ದಟ್ಟ ಕಾಡಿಗೆ ಅನಿಮಲ್ ಸೈಕಾಲಜಿಸ್ಟ್ ಆಗಿ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ನಾಯಕ. ನಾಯಕಿಯ ಜೊತೆಗೆ ಚಾರಣಕ್ಕೆ ಹೋದಾಗ ಯಾವ ರೀತಿಯ ಅನುಭವಗಳು ಆಗುತ್ತವೆ ಎನ್ನುವುದನ್ನು ಈ ಚಿತ್ರ ತೆರೆಯ ಮೇಲೆ ತಂದಿಟ್ಟಿದೆ. ವಿಚಿತ್ರ ಅನುಭವಗಳ ಜೊತೆಗೆ ತಮಗೆ ಉಂಟಾದ ಸಮಸ್ಯೆಗಳಿಂದ ಅವರು ಹೊರಬರುತ್ತಾರೆಯೇ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.
ಚಿತ್ರದ ನಾಯಕ ವಿನಯ್ ವಾಸುದೇವ್ ನಿರ್ದೇಶಕ ಆಗಿಯೂ ಕೆಲಸ ಮಾಡಿದ್ದಾರೆ. ನಿರ್ದೇಶನದ ಒತ್ತಡದ ನಡುವೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವ ಯತ್ನ ಮಾಡಿದ್ದಾರೆ. ನಾಯಕಿಯಾಗಿ ಕಾಣಿಸಿಕೊಂಡಿರುವ ದಿಶಾ ರಮೇಶ್ ಗಮನ ಸೆಳೆಯುತ್ತಾರೆ. ನಾಗೇಂದ್ರ ಅರಸ್, ಬಾಲರಾಜ ವಾಡಿ, ಹರಿಣಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಗ್ರಾಫಿಕ್ಸ್ ಮೂಲಕ ವನ್ಯಜೀವಿಗಳನ್ನು ಚಿತ್ರದಲ್ಲಿ ತೋರಿಸಿರುವ ಬಗೆ ಮೆಚ್ಚುವಂತಿದೆ. ಸಾಹಸ ಹಾಗೂ ಥ್ರಿಲ್ಲರ್ ಚಿತ್ರಗಳನ್ನು ಇಷ್ಟಪಡುವವರಿಗೆ ಈ ಚಿತ್ರ ಖುಷಿ ನೀಡುತ್ತದೆ.

Be the first to comment