‘ಡಿಸೆಂಬರ್ 24’ ಚಿತ್ರಕ್ಕೆ ಭೂಮಿಕಾ ರಮೇಶ್ ನಾಯಕಿ

ಡಿಸೆಂಬರ್ 24 ಟೈಟಲ್ಲೇ ಹೇಳುವ ಹಾಗೆ ಸಸ್ಪೆನ್ಸ್, ಥ್ರಿಲ್ಲರ್, ಹಾರರ್, ಲವ್, ಸೆಂಟಿಮೆಂಟ್ ಹೀಗೆ ಎಲ್ಲ ರೀತಿಯ ಎಂಟರ್‍ಟೈನಿಂಗ್ ಅಂಶಗಳನ್ನು ಒಳಗೊಂಡಿರುವ ಚಿತ್ರ. ಎ.ದೇವುಹಾಸನ್, ವಿ.ಬೆಟ್ಟೇಗೌಡ ಸೇರಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಾಗರಾಜ್ ಎಂ.ಜಿ.ಗೌಡ ಇದೇ ಮೊದಲಬಾರಿಗೆ ಆ್ಯಕ್ಷನ್‍ಕಟ್ ಹೇಳಿದ್ದಾರೆ.ವೈದ್ಯಕೀಯ ಸಂಶೋಧನೆಯ ಸುತ್ತ ಹೆಣೆಯಲಾಗಿರುವ ಈ ಚಿತ್ರದ ಕಥೆಗೆ ಕುಣಿಗಲ್ ತಾಲ್ಲೂಕಿನ ಹುಲಿಯೂರು ದುರ್ಗ ಎಂಬಲ್ಲಿ ನಡೆದಂಥ ನೈಜ ಘಟನೆಯೇ ಪ್ರೇರಣೆ. ಅಲ್ಲಿನ ಆಸ್ಪತ್ರೆಯೊಂದರಲ್ಲಿ ಹುಟ್ಟಿದ ಮಕ್ಕಳು ಇದ್ದಕ್ಕಿದ್ದಂತೆ ಅಸುನೀಗುವ ಪ್ರಕರಣಗಳು ನಡೆಯುತ್ತದೆ.

ಅದರ ಕಾರಣಗಳನ್ನು ಹುಡುಕಿಕೊಂಡು ಹೊರಟಾಗ ಕೆಲ ಸಮಸ್ಯೆಗಳು ಬಿಚ್ಚಿಕೊಳ್ಳುತ್ತವೆ. ಅದನ್ನೇ ಆಧಾರವಾಗಿಟ್ಟುಕೊಂಡು ಈ ಚಿತ್ರದ ಕಥೆ ಮಾಡಲಾಗಿದೆ. ವೈದ್ಯಕೀಯ ಸಂಶೋಧನೆಗೆಂದು ಕಾಡಿಗೆ ತೆರಳುವ ಮೆಡಿಕಲ್ ವಿದ್ಯಾರ್ಥಿಗಳು, ಗಿಡಮೂಲಿಕೆಗಳನ್ನು ಹುಡುಕುವ ಹಾದಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ಹೀಗೆ ಸಾಕಷ್ಟು ರೋಚಕ ತಿರುವುಗಳನ್ನು ಹೊಂದಿರುವ ಡಿಸೆಂಬರ್ 24 ಚಿತ್ರಕ್ಕೆ ನಾಯಕಿಯಾಗಿ ಅಪ್ಪಟ ಕನ್ನಡದ ಪ್ರತಿಭೆ ನಟಿ ಭೂಮಿಕಾ ರಮೇಶ್ ವರು ಎಂಟ್ರಿ ಕೊಟ್ಟಿದ್ದಾರೆ. ಅಪ್ಪು ಬಡಿಗೇರ್ ಈ ಚಿತ್ರದ ನಾಯಕ, ಹುಲಿಯೂರು ದುರ್ಗ, ಮಾಗಡಿ, ಚಿಕ್ಕಮಗಳೂರು, ಯಲ್ಲಾಪುರದ ಸುತ್ತಮುತ್ತಲ ಸ್ಥಳಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ. ನೈಜ ಬದಲಿಸಿದ ಈ ಚಿತ್ರದ ಎರಡನೇ ಹಂತದ ಚಿತ್ರೀಕರಣ ಈಗ ಬಿರುಸಿನಿಂದ ಸಾಗಿದೆ.

ದೇಶದಲ್ಲಿ ಪ್ರತಿದಿನ ಹುಟ್ಟುವ ನೂರರಲ್ಲಿ ಮೂರು ಮಕ್ಕಳು ಉಸಿರಾಟದ ಸಮಸ್ಯೆಯಿಂದ ಸಾಯುತ್ತಿವೆ. ಇದಕ್ಕೆ ಯಾವುದೇ ಔಷಯನ್ನು ಈವರೆಗೆ ಕಂಡು ಹಿಡಿದಿಲ್ಲ ಇಂತಹದೊಂದು ಸಮಸ್ಯೆಯನ್ನು ಮುಂದಿಟ್ಟುಕೊಂಡು ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ 2015ರಿಂದ 2019ರವರೆಗೆ ನಡೆದ ಕೆಲವೊಂದು ನೈಜ ಘಟನೆಗಳನ್ನಿಟ್ಟುಕೊಂಡು ಕಥೆ ಹೆಣೆಯಲಾಗಿದೆ.

ಪಕ್ಕಾ ಫ್ಯಾಮಿಲಿ, ಲವ್, ಫ್ರೆಂಡ್‍ಷಿಪ್, ಹಾರರ್, ಥ್ರಿಲ್ಲರ್ ಎಲಿಮೆಂಟ್‍ಗಳನ್ನು ಚಿತ್ರ ಒಳಗೊಂಡಿದೆ. ಉಸಿರಾಟದ ಸಾಯುತ್ತಿರುವ ಮಕ್ಕಳನ್ನು ಉಳಿಸಿಕೊಳ್ಳಲು ವೈದ್ಯಕೀಯ ವಿದ್ಯಾರ್ಥಿಗಳು ಸಂಶೋಧನೆ ಮಾಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸುವ ಘಟನೆಯನ್ನು ಮುಂದಿಟ್ಟುಕೊಂಡು ಅದಕ್ಕೆ ಸಿನಿಮಾ ರೂಪ ನೀಡಲಾಗುತ್ತದೆ ಎನ್ನುತ್ತಾರೆ ನಿರ್ದೇಶಕ ನಾಗರಾಜ್ ಗೌಡ.

ಈ ಚಿತ್ರಕ್ಕಾಗಿಯೇ ನಿರ್ದೇಶಕರು ಒಂದೂವರೆ ವರ್ಷದಿಂದ ಸಾಕಷ್ಟು ವೈದ್ಯರನ್ನು ಸಂದರ್ಶಿಸಿ ಮಾಹಿತಿ ತಿಳಿದುಕೊಂಡು ಸ್ಕ್ರಿಪ್ಟ್ ಸಿದ್ದಪಡಿಸಿದ್ದಾರೆ. ಈ ಚಿತ್ರದಲ್ಲಿ ಅಪ್ಪು ಬಡಿಗೇರ, ರವಿ ಕೆ. ಆರ್. ಪೇಟೆ, ರಘು ಶೆಟ್ಟಿ, ಜಗದೀಶ್ ಹೆಚ್. ಜಿ. ದೊಡ್ಡಿ ಹಾಗೂ ಪ್ರಮುಖ ಪಾತ್ರದಲ್ಲಿ ಪೂಜಾ, ಜಿ. ಸಂಹಿತಾ ಅರಣ್ಯ ಅಭಿನಯಿಸುತ್ತಿದ್ದಾರೆ. ಸ್ಟಾರ್ ನಟರೊಬ್ಬರು ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡುವ ಸಾದ್ಯತೆಗಳಿವೆ. ಈ ಚಿತ್ರದಲ್ಲಿ 4 ಹಾಡುಗಳಿದ್ದು ಪ್ರವೀಣ್ ನಿಕೇತನ್ ಅವರ ಸಂಗೀತ, ವಿನಯ್‍ಗೌಡ ಅವರ ಛಾಯಾಗ್ರಹಣವಿದೆ. ಆನಂದ್ ಪಟೇಲ್ ಹುಲಿಕಟ್ಟೆ ಅವರು ಒಬ್ಬ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!