ಡಿಸೆಂಬರ್ ವೇಳೆ ಕೆಜಿಎಫ್ 2 ರಿಲೀಸ್?

ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ‘ ಕೆಜಿಎಫ್ 2 ‘ ಚಿತ್ರ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕೆಜಿಎಫ್ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಸಂಜಯ್ ದತ್ ಪಾತ್ರ ಬಿಟ್ಟು ಉಳಿದ ಎಲ್ಲ ಕಲಾವಿದರೂ ಡಬ್ ಮುಗಿಸಿದ್ದಾರೆ. ಹಿಂದಿಯಲ್ಲಿ ಸಂಜಯ್ ದತ್ ಡಬ್ ಮಾಡಲಿದ್ದಾರೆ. ಆದರೆ ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಡಬ್ಬಿಂಗ್ ಕಲಾವಿದರು ಧ್ವನಿ ನೀಡಲಿದ್ದಾರೆ.

ಕನ್ನಡದಲ್ಲಿ ಸಂಜಯ್ ದತ್ ಅವರ ಅಧೀರನ ಪಾತ್ರಕ್ಕೆ ಸೂಕ್ತ ಧ್ವನಿಯ ಹುಡುಕಾಟ ನಡೆಯುತ್ತಿದೆ. ಇದರಿಂದ ರಿಲೀಸ್ ಡೇಟ್ ಪ್ರಕಟಿಸಲು ತಡವಾಗುತ್ತಿದೆ ಎಂದು ಹೇಳಲಾಗಿದೆ.

ಚಿತ್ರದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರು ಪ್ರಧಾನಿ ರಮಿಕಾ ಸೇನ್ ಆಗಿ ಅಭಿನಯಿಸಿದ್ದಾರೆ. ರವೀನಾ ಅವರ ಮೇಕಿಂಗ್ ಫೋಟೋ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿದೆ. ಹಿಂದಿಯಲ್ಲಿ ಈ ಚಿತ್ರವನ್ನು ಎಕ್ಸೆಲ್ ಎಂಟರ್‌ಟೈನ್ ಸಂಸ್ಥೆಯಡಿ ರಿತೇಶ್ ಸಿದ್ವಾನಿ ಮತ್ತು ಫರಾನ್ ಅಖ್ತರ್ ರಿಲೀಸ್ ಮಾಡುತ್ತಿದ್ದಾರೆ.

ಕೆಜಿಎಫ್ ಚಿತ್ರದ ರಿಲೀಸ್ ಡೇಟ್ ಘೋಷಣೆ ಮಾಡುವಂತೆ ಚಿತ್ರಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಆಗ್ರಹ ಮಾಡುತ್ತಿದ್ದಾರೆ. ಇದುವರೆಗೂ ಚಿತ್ರದ ಬಗ್ಗೆ ಯಾವುದೇ ಅಪ್‌ಡೇಟ್ ಹೊರಬಿದ್ದಿಲ್ಲ. ಚಿತ್ರತಂಡ ರಿಲೀಸ್ ಡೇಟ್ ಘೋಷಣೆ ಮಾಡುವುದನ್ನೇ ಚಿತ್ರ ಪ್ರೇಮಿಗಳು ಕಾಯುವುದು ಸದ್ಯ ಅನಿವಾರ್ಯ ಆಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!