ಡಿಸೆಂಬರ್ 18ಕ್ಕೆ ‘ಆರ್.ಹೆಚ್.100’ ತೆರೆಗೆ

ಕೊರೋನಾ ಹೇರಿದ್ದ ಲಾಕ್‌ಡೌನ್ ತೆರೆವಿನ ಬೆನ್ನಹಿಂದೆ ಸಾಲು ಸಾಲು ಚಿತ್ರಗಳಯ ತೆರೆಗಪ್ಪಳಿಸಲು ಸಿದ್ಧವಾಗಿವೆ. ಈ ಸಾಲಿಗೆ ಆರ್.ಹೆಚ್.100 ಚಿತ್ರವೂ ಸೇರಿ, ಡಿಸೆಂಬರ್ 18ಕ್ಕೆ ರಿಲೀಸ್ ಆಗ್ತಿದೆ. ಹಾರರ್ ಜಾನರ್‌ನ ಚಿತ್ರದ ಹಾಡುಗಳು, ಟೀಸರ್ ಈಗಾಗಲೇ ಬಿಡುಗಡೆಯಾಗಿ ಸಾಕಷ್ಟು ಸದ್ಧು ಮಾಡಿತ್ತು. ಇತ್ತೀಚಿಗೆ ಚಿತ್ರದ ಟ್ರೆಲರ್ ರಿಲೀಸ್ ಆಗಿ, ಪ್ರೇಕ್ಷಕರಲ್ಲಿ ಆರ್.ಹೆಚ್.100 ಇನ್ನಷ್ಟು ಕುತೂಹಲ ಕೆರಳಿಸಿದೆ. ಟ್ರೆಲರ್ ಅನ್ನು ಗಮನಿಸಿದರೆ ಚಿತ್ರ ತಂಡ ಸಾಕಷ್ಟು ತಯಾರಿಯೊಂದಿಗೆ ಹೆಜ್ಜೆ ಇಟ್ಟಿರೋದರ ಅರವಾಗುತ್ತದೆ. ಹಾರಾರ್ ಜಾನರ್‌ಗೆ ಸೂಕ್ತವಾದ ಲೋಕೆಶನ್, ಜೊತೆಗೆ ಬೆಚ್ಚಿಬೇಳಿಸುವ ಹಿನ್ನಲೆ ಸಂಗೀತ ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ.ಎಸ್.ಎಲ್.ಎಸ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಹರೀಶ್ ಕುಮಾರ್ ನಿರ್ಮಿಸಿರುವ ಈ ಚಿತ್ರವನ್ನು ಮಹೇಶ್.ಎಂ.ಸಿ ನಿರ್ದೇಶಿಸಿದ್ದಾರೆ. ಮಲ್ವಿನ್ ಮೈಕಲ್ ಸಂಗೀತ ನಿದೇಶನದಲ್ಲಿ ಸಂಜಿತ್ ಹೆಗ್ಡೆ ಮತ್ತು ಅನುರಾಧ ಭಟ್ ಹಾಡಿರುವ ಈ ಚಿತ್ರದ ಹಾಡೊಂದು ಈಗಾಗಲೇ ವೈರಲ್ ಆಗಿದ್ದು, ಚಿತ್ರ ತಂಡಕ್ಕೆ ಚಿತ್ರ ಬಿಡುಗಡೆಮಾಡುವ ಧೈರ್ಯ ತಂದುಕೊಟ್ಟಿದೆ. ಹೊಸಬರೆ ನಟಿಸಿರುವ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಗಣೇಶ್, ಹರ್ಷ, ಚಿತ್ರ, ಕಾವ್ಯ, ಸೋಮ್ ಮತ್ತು ಸುಹಿತ್ ಕಾಣಿಸಿಒಂಡಿದ್ದಾರೆ. ಕೃಷ್ಣ ಅವರ ಛಾಯಾಗ್ರಹಣವಿರುವ ಆರ್.ಹೆಚ್.100 ಬಿಡುಗೆಯಾಗಿ, ಮತ್ತೆ ಹಾರರ್ ಚಿತ್ರಗಳ ಮಳೆಗೆ ನಾಂದಿ ಹಾಡುತ್ತದಾ ಕಾದು ನೋಡಬೇಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!