ಡಿ.10ಕ್ಕೆ ಬ್ರೇಕ್ ಫೇಲ್ಯೂರ್ ತೆರೆಗೆ

ಆದಿತ್ ನವೀನ್ ನಿರ್ದೇಶನದ ಮೊದಲ ಸಿನಿಮಾ ಬ್ರೇಕ್ ಫೇಲ್ಯೂರ್ ಡಿಸೆಂಬರ್ 10 ರಂದು ತೆರೆ ಕಾಣಲಿದೆ.

ಈ ಹಿಂದೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಆದಿತ್ ನವೀನ್ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ನಾಯಕಿಯಾಗಿ ಕೃತಿ ಗೌಡ ಅಭಿನಯ ತೋರಿದ್ದಾರೆ. ಉಗ್ರಂ ಖ್ಯಾತಿಯ ರವಿ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ.

ಕಾಲೇಜು ಹಿನ್ನೆಲೆಯ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಸಿನಿಮಾ ಹೊಂದಿದೆ. ಸಿನಿಮಾದ ಪ್ರಮುಖ ದೃಶ್ಯಗಳನ್ನು ಕಾಡಿನಲ್ಲಿ ಚಿತ್ರೀಕರಿಸಲಾಗಿದೆ.
ಬ್ರೇಕ್ ಫೇಲ್ಯೂರ್ ಚಿತ್ರಕ್ಕೆ ಅಭಿಷೇಕ್ ಜಿ ರಾಯ್ ಮತ್ತು ಕೆವಿನ್ ಎನ್ ಸಂಗೀತ ನೀಡಿದ್ದಾರೆ. ರಿಷಿಕೇಶ್ ಅವರ ಛಾಯಾಗ್ರಹಣ ಚಿತ್ರಕ್ಕೆ ಇದೆ. ಸಾಹಸ ನಾಗ್ ಕೀರ್ತಿ, ಸಂಕಲನವನ್ನು ಅಲೆಕ್ಸ್ ಮಾಡಿದ್ದಾರೆ.

“ಈ ಚಿತ್ರವನ್ನು ತೆರೆಗೆ ತರಲು ಸುಮಾರು ಎರಡು ವರ್ಷಗಳ ಕಾಲ ಕಾದೆವು. ನಾವು ಇನ್ನೂ ಕಾಯುವ ತಾಳ್ಮೆ ಕಳೆದುಕೊಳ್ಳುತ್ತಿದ್ದೇವೆ. ಹೀಗಾಗಿ ಬೇರೆ ಸಿನಿಮಾಗಳ ಬಿಡುಗಡೆಯ ದಿನವೇ ಚಿತ್ರ ಬಿಡುಗಡೆ ಮಾಡುವುದು ಬಿಟ್ಟು ನಮಗೆ ಬೇರೆ ದಾರಿಯಿಲ್ಲ” ಎಂದು ನಾಯಕ ಮತ್ತು ನಿರ್ದೇಶಕ ಅದಿತ್ ನವೀನ್ ಹೇಳಿದ್ದಾರೆ.
ನಿರ್ದೇಶಕ ಅದಿತ್ ನವೀನ್ , ತಮ್ಮ ಮುಂದಿನ ಪ್ರಾಜೆಕ್ಟ್‌ಗೆ ಸಿದ್ಧರಾಗುತ್ತಿದ್ದಾರೆ.
“ನನ್ನ ಎರಡನೇ ಚಿತ್ರದ ಅಧಿಕೃತ ಬಿಡುಗಡೆ ಜನವರಿ 12ರಂದು ನಡೆಯಲಿದೆ. ನಾವು ಶೀರ್ಷಿಕೆ ಮತ್ತು ಸಂಬಂಧಿತ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಗೊಳಿಸುತ್ತೇವೆ” ಎಂದು ಅವರು ತಿಳಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!