“ಡಿಯರ್ ಕಾಮ್ರೇಡ್’​ನಲ್ಲಿ ರೊಮ್ಯಾಂಟಿಕ್ ಜೋರು!

ಟಾಲಿವುಡ್​ನ ಬೆಸ್ಟ್​ ಜೋಡಿಗಳಲ್ಲಿ ಯಂಗ್ ಆ್ಯಂಡ್ ಎನರ್ಜಿಟಿಕ್ ವಿಜಯ್ ದೇವರಕೊಂಡ ಮತ್ತು ಕನ್ನಡದ ಕ್ರಶ್ ಚೆಲುವೆ ರಶ್ಮಿಕಾ ಮಂದಣ್ಣ ಜೋಡಿ ಕೂಡ ಒಂದು. ಹೌದು!, “ಗೀತಾ ಗೋವಿಂದಂ’ ಚಿತ್ರದ ಮೂಲಕ ಕಮಾಲ್ ಮಾಡಿದ್ದ ಈ ಜೋಡಿ ಇದೀಗ “ಡಿಯರ್ ಕಾಮ್ರೇಡ್’​ನಲ್ಲಿ ಮತ್ತೆ ಒಂದಾಗಿದ್ದು, ಭರತ್ ಕಾಮಾ ನಿರ್ದೇಶನದಲ್ಲಿ ಚಿತ್ರ ಸೆಟ್ಟೇರಿದೆ.

ಈಗಾಗಲೇ ಚಿತ್ರದ ಟೀಸರ್ ಹಾಗೂ ಕೆಲ ಹಾಡುಗಳಿಂದ ಸಿನಿರಸಿಕರ ಗಮನ ಸೆಳೆದಿದ್ದು, ಇದೀಗ ಚಿತ್ರತಂಡ ಮತ್ತೊಂದು ರೊಮ್ಯಾಂಟಿಕ್ ಸಾಂಗ್ ರಿಲೀಸ್ ಮಾಡಿದೆ. “ಕಡಲಂತೆ ಕಾದ ಕಣ್ಣು.. ನದಿಯಂತೆ ಓಡುವ ಕನಸು’ ಎಂಬ ಹಾಡು ಇದಾಗಿದ್ದು, ಹಾಡಿಗೆ ಧನಂಜಯ್ ರಂಜನ್​ ಸಾಹಿತ್ಯವಿದೆ.

ಸಿದ್​ ಶ್ರೀರಾಮ್ ಹಾಗೂ ಐಶ್ವರ್ಯ ರವಿಚಂದ್ರನ್ ಕಂಠದಲ್ಲಿ ಈ ಹಾಡು ಮೆಲೋಡಿಯಾಗಿ ಮೂಡಿಬಂದಿದೆ. ಇನ್ನು “ಡಿಯರ್ ಕಾಮ್ರೇಡ್’​ ಲವ್​ ಕಂ ರೊಮ್ಯಾಂಟಿಕ್ ಚಿತ್ರವಾಗಿದ್ದು, ಕನ್ನಡ ಸೇರಿದಂತೆ ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಗಳಲ್ಲೂ ತೆರೆಕಾಣಲಿದೆ.

This Article Has 1 Comment
  1. Pingback: car detailing

Leave a Reply

Your email address will not be published. Required fields are marked *

Translate »
error: Content is protected !!