‘ಡೆಡ್ಲಿ ಅಫೇರ್’ ಚಿತ್ರದಲ್ಲಿ ಗುಂಜಾನ್ ಅರಸ್

ಪರಭಾಷೆಯಿಂದ ಕನ್ನಡಕ್ಕೆ ಇದುವರೆಗೂ ಎಷ್ಟೋ ನಟ-ನಟಿಯರು ಬಂದಿದ್ದಾರೆ. ಇದೀಗ ಮಧ್ಯಪ್ರದೇಶದ ಇಂದೋರ್​ನಿಂದ ಮಾದಕ ನಟಿ ಗುಂಜಾನ್ ಅರಸ್​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​ ಕನ್ನಡಕ್ಕೆ ಬಂದಿದ್ದಾರೆ. ಗುಂಜಾನ್ ಅರಸ್ ಹಾಟ್​ ಲುಕ್​​​​ಗೆ ಫೇಮಸ್ ಆದವರು.

ಮಾಡೆಲ್ ಹಾಗೂ ನಟಿ ಆಗಿರುವ ಗುಂಜಾನ್ ಅರಸ್, ‘ಬೀರ್​​​​​ ಬಾಯ್ಸ್ ಮತ್ತು ವೋಡ್ಕ ಗಲ್ರ್ಸ್’ ವೆಬ್​​​ಸೀರೀಸ್​​​​​​​​​​ನಲ್ಲಿ ನಟಿಸಿ ನಂತರ ತೆಲುಗು ಚಿತ್ರರಂಗಕ್ಕೆ ಬಂದರು. ಈಗ ಕನ್ನಡದ ‘ಡೆಡ್ಲಿ ಅಫೇರ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಚ್ಚಮ್ಮನಾಗಿ ಗುಂಜಾನ್ ಅವರ ಕೆಲವು ಫೋಟೋಗಳನ್ನು ಕೂಡಾ ಹರಿಯಬಿಟ್ಟಿದ್ದೆ ಚಿತ್ರತಂಡ. ವಿವಾಹೇತರ ಸಂಬಂಧ ಕುರಿತಾದ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಷಡ್ಯಂತ್ರ, ರೆಡ್, ಬ್ಲೂ ಐಸ್​ ಸಿನಿಮಾಗಳ ನಂತರ ರಾಜೇಶ್ ಮೂರ್ತಿ ‘ಡೆಡ್ಲಿ ಅಫೇರ್​​​’ ಚಿತ್ರವನ್ನು ನಿರ್ಮಾಣದ ಜೊತೆ ನಿರ್ದೇಶನ ಕೂಡಾ ಮಾಡಿದ್ದಾರೆ.

ಬಹುತೇಕ ಪುರುಷರ ಜೀವನದಲ್ಲಿ ನಡೆಯುವ ಕಥಾವಸ್ತು ಈ ಚಿತ್ರದಲ್ಲಿ ಅಡಗಿದೆ. ಪುರುಷರು ಯಾವ ರೀತಿ ಬ್ಲಾಕ್​ಮೇಲ್​​​ಗೆ ಒಳಗಾಗುತ್ತಾರೆ. ಯಾವ ರೀತಿ ನೋವು ಅನುಭವಿಸುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಓಂ ಶ್ರೀ ಸಿನಿಮಾಸ್ ಅಡಿಯಲ್ಲಿ ರಾಜೇಶ್ ಮೂರ್ತಿ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಸಹ ಬರೆದಿದ್ದಾರೆ. ಚಿತ್ರಕ್ಕೆ ನಿತಿನ್ ಕುಮಾರ್ ಸಂಗೀತ, ವಿನೋದ್​​​. ಆರ್ ಛಾಯಾಗ್ರಹಣ ಇದೆ. ನಾಗರಾಜ್ ಮತ್ತು ಮಹೇಶ್ವರಪ್ಪ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ನಾಯಕನಾಗಿ ಸ್ವಪನ್ ಕೃಷ್ಣ, ನಾಯಕಿಯಾಗಿ ಗುಂಜಾನ್ ಅರಸ್​​​​​​​​ ನಟಿಸಿದ್ದರೆ ಉಳಿದಂತೆ ಸೋಮಣ್ಣ, ರಾಜೇಶ್​ ಮಿಶ್ರ, ವಿಶ್ರುತ್ ಹಾಗೂ ಇನ್ನಿತರರು ತಾರಾಗಣದಲ್ಲಿದ್ದಾರೆ.

This Article Has 2 Comments
  1. Pingback: controleer dat

  2. Pingback: sex binding hormone globulin levels in men

Leave a Reply

Your email address will not be published. Required fields are marked *

Translate »
error: Content is protected !!