ನಟಿ, ಬಿಗ್ ಬಾಸ್ ಕನ್ನಡ 10ರ ಸ್ಪರ್ಧಿ ನಮ್ರತಾ ಗೌಡಗೆ ರಾಜಕಾರಣಿಗಳೊಂದಿಗೆ ಡೇಟಿಂಗ್ ಮಾಡುವಂತೆ ವ್ಯಕ್ತಿಯೊಬ್ಬ ಆನ್ ಲೈನ್ ನಲ್ಲಿ ಡೇಟಿಂಗ್ ಆಫರ್ ನೀಡಿದ್ದಾನೆ !
ನಮ್ರತಾ ಗೌಡ ಇದನ್ನು ಸ್ಕ್ರೀನ್ ಶಾಟ್ ತೆಗೆದು ತನ್ನ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ‘ಮಿಸ್ಟರ್ ರೋಷನ್, ಇದನ್ನು ಇಲ್ಲಿಗೆ ನಿಲ್ಲಿಸಿ’ಎಂದು ನಮ್ರತಾ ಗೌಡ ಎಚ್ಚರಿಕೆ ನೀಡಿದ್ದಾರೆ.
ರಾಕಿ ಜಿ43 ಹೆಸರಿನ ಇನ್ಸ್ಟಾಗ್ರಾಂ ಖಾತೆಯಿಂದ ಸಂದೇಶ ಕಳುಹಿಸಿರುವ ರೋಷನ್ ಎಂಬಾತ ತನಗೆ ಸಾಕಷ್ಟು ರಾಜಕಾರಣಿಗಳ ಜೊತೆಗೆ ನಂಟಿದೆ. ರಾಜಕಾರಣಿಗಳ ಜೊತೆಗೆ ಡೇಟಿಂಗ್ ಮಾಡುವಂತೆ ನಮ್ರತಾ ಗೌಡರನ್ನು ಕೇಳಿದ್ದಾನೆ.
‘ನಿಮ್ಮ ಫೋನ್ ನಂಬರ್, ಫೋಟೋಗಳನ್ನು ಕಳುಹಿಸುವ ಅಗತ್ಯವಿಲ್ಲ. ಡೇಟಿಂಗ್‌ಗೆ ಬುಕ್ ಮಾಡ್ತೀನಿ. ಹೆಚ್ಚಿನ ಹಣ ಕೇಳಿದರೂ ಕೊಡಲು ಸಿದ್ಧನಿದ್ದೇನೆ. 200% ಎಲ್ಲವೂ ಖಾಸಗಿ ಆಗಿರುತ್ತದೆ. ಯಾರಿಗೂ ಗೊತ್ತಾಗುವುದಿಲ್ಲ. ಸೇಫ್ ಆಗಿರುತ್ತದೆ’ ಎಂದು 4 ಬಾರಿ ಸಂದೇಶವನ್ನು ನಟಿಗೆ ಕಳುಹಿಸಿದ್ದಾರೆ. ಇದರಿಂದ ಸಿಡಿದೆದ್ದ ನಮ್ರತಾ ಗೌಡ ಸ್ಕ್ರೀನ್‌ಶಾಟ್ ನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಸದ್ಯ ನಮ್ರತಾ ಗೌಡ ಅವರು ‘ಕರ್ಣ’ ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಕಿರಣ್ ರಾಜ್, ಭವ್ಯಾ ಗೌಡ ಜೊತೆ ಕಾಣಿಸಿಕೊಂಡಿದ್ದಾರೆ. ಶ್ರುತಿ ನಾಯ್ಡು ಈ ಧಾರವಾಹಿಯ ನಿರ್ಮಾಪಕಿಯಾಗಿದ್ದಾರೆ.
—-

Be the first to comment