ಚಿತ್ರ: ದಸ್ಕತ್
ನಿರ್ದೇಶನ: ಅನೀಶ್ ಪೂಜಾರಿ
ತಾರಾ ಬಳಗ: ನವೀನ್ ಬೊಂದೆಲ್, ದೀಕ್ಷಿತ್ , ಭವ್ಯ, ಚಂದ್ರಹಾಸ ಉಳ್ಳಾಲ ಇತರರು
ರೇಟಿಂಗ್: 3.5
ಸರಕಾರಿ ವ್ಯವಸ್ಥೆಯಲ್ಲಿ ಇಂದು ಸಾಮಾನ್ಯವಾಗಿರುವ ಭ್ರಷ್ಟತೆಯನ್ನು ತೊಡೆದು ಹಾಕಲು ಯತ್ನಿಸುವ ಯುವಕರ ಕಥೆಯೇ ಈ ವಾರ ತೆರೆಗೆ ಬಂದಿರುವ ದಸ್ಕತ್ ಸಿನಿಮಾ.
ಚಿತ್ರದಲ್ಲಿ ದಕ್ಷಿಣ ಕನ್ನಡದ ಪುಟ್ಟ ಊರಿನಲ್ಲಿ ನಡೆಯುವ ಸರಕಾರಿ ವ್ಯವಸ್ಥೆಯ ಭ್ರಷ್ಟತೆಯನ್ನು ತೋರಿಸುವ ಯತ್ನ ಮಾಡಲಾಗಿದೆ. ದಸ್ಕತ್ ಅಂದರೆ ಸಹಿ ಹಾಕಲು 20 ರೂಪಾಯಿ ಲಂಚ ಪಡೆಯುವ ಅಧಿಕಾರಿಯನ್ನು ಮಟ್ಟ ಹಾಕಲು ಯುವಕರು ಯತ್ನಿಸುವ ಕಥೆ ಇಲ್ಲಿದೆ. ಜೊತೆಗೆ ಚಿತ್ರದಲ್ಲಿ ಗ್ರಾಮದೇವತೆಯ ಹಬ್ಬ, ಪ್ರೇಮ ಕಥೆಯೂ ಇದೆ.
ಚಿತ್ರದ ಕಥೆಯನ್ನು ನಿರ್ದೇಶಕರು ಕಟ್ಟಿ ಕೊಟ್ಟಿರುವ ರೀತಿ ಚೆನ್ನಾಗಿದೆ. ಕೆಲವೇ ಕಲಾವಿದರು ನಟಿಸಿರುವ ಚಿತ್ರದಲ್ಲಿ ಎಲ್ಲರೂ ನಟನೆಯ ಮೂಲಕ ಗಮನ ಸೆಳೆಯುತ್ತಾರೆ. ಭ್ರಷ್ಟ ಅಧಿಕಾರಿಯ ಭ್ರಷ್ಟತೆ ಕೊನೆಯಾಗುತ್ತದೆಯೇ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.
ಭ್ರಷ್ಟತೆಯನ್ನು ತೊಡೆದು ಹಾಕಲು ಯುವಕರು ಮತ್ತೆ ಹುಟ್ಟುತ್ತಲೇ ಇರುತ್ತಾರೆ ಎನ್ನುವ ಸಂದೇಶ ಹೇಳುವ ಯತ್ನವನ್ನು ಚಿತ್ರ ಮಾಡಿದೆ. ಪ್ರಾದೇಶಿಕ ಚಿತ್ರವಾಗಿ ದಸ್ಕತ್ ಗಮನ ಸೆಳೆಯುತ್ತದೆ.

Be the first to comment