ಬಳ್ಳಾರಿಗೆ ದರ್ಶನ್ ಸ್ಥಳಾಂತರ

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ಎದುರಿಸಿರುವ ನಟ ದರ್ಶನ್‌ ಅವರನ್ನು ಇಂದು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ.

ರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಅನುಭವಿಸುತ್ತಿದ್ದ ದರ್ಶನ್‌ ಜೈಲಿನಲ್ಲಿ ನಟೋರಿಯಸ್ ರೌಡಿಗಳ ಜೊತೆ ಕೂತು ಮಾತನಾಡುತ್ತಾ ಸಿಗರೇಟ್ ಸೇದುತ್ತಿದ್ದ  ಫೋಟೊ, ವೀಡಿಯೋ ಕಾಲ್‌ನಲ್ಲಿ ಮಾತನಾಡಿರುವುದು ಚರ್ಚೆ ಹುಟ್ಟಾಕ್ಕಿತ್ತು.

ಬೆಂಗಳೂರಿನ ನ್ಯಾಯಾಲಯದಿಂದ ಅನುಮತಿ ಸಿಕ್ಕ ನಂತರ ಇಂದು ಬೆಳ್ಳಿಗ್ಗೆ 4-30ಕ್ಕೆ ಸ್ಥಳಾಂತರ ಪ್ರಕ್ರಿಯೆ ಆರಂಭ ಮಾಡಿದ ಪೊಲೀಸರು ಬಿಗಿ ಭಧ್ರತೆಯಲ್ಲಿ ದರ್ಶನ್ ಅವರನ್ನು ಬಳ್ಳಾರಿಗೆ ಕರೆದೊಯ್ದರು.

ಎಸಿಪಿ ಭರತ್ ರೆಡ್ಡಿಯವರ ನೇತೃತ್ವದಲ್ಲಿ ದರ್ಶನ್ ಅವರನ್ನು ಸ್ಥಳಾಂತರ ಮಾಡಲಾಗಿದ್ದು, ಅಭಿಮಾನಿಗಳ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು  ಮಾರ್ಗವನ್ನು ಬದಲಿಸಲಾಗಿದೆ. ಆರಂಭದಲ್ಲಿ ಬೆಂಗಳೂರು – ತುಮಕೂರು- ಚಳ್ಳಕೆರೆ ಮೂಲಕ ಮೊಳಕಾಲ್ಮುರು ಮತ್ತು ರಾಂಪುರ ತಲುಪಿ ಅಲ್ಲಿಂದ ಬಳ್ಳಾರಿಗೆ ಹೋಗಲು ಪೊಲೀಸರು ನಿರ್ಧಾರ ಮಾಡಿದ್ದರು.

ನಂತರ ರೂಟ್ ಮ್ಯಾಪ್ ಬದಲಿಸಿದ ಪೊಲೀಸರು ಆಂಧ್ರ ಮಾರ್ಗದಲ್ಲಿ ಪ್ರಯಾಣ ಬೆಳೆಸಿದರು. ಪರಪ್ಪನ ಅಗ್ರಹಾರದಿಂದ ಸಿಲ್ಕ್ ಬೋರ್ಡ್ , ಮೇಖ್ರಿ ಸರ್ಕಲ್, ಹೆಬ್ಬಾಳ, ಯಲಹಂಕ, ದೇವನಹಳ್ಳಿ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಪೆನಗೊಂಡ, ಹಾಗೂ ಅನಂತ ಪುರ ಮಾರ್ಗವಾಗಿ ಬಳ್ಳಾರಿಯನ್ನು ಪ್ರವೇಶಿಸಲು ನಿರ್ಧರಿಸಿದರು.

ಪರಪ್ಪನ ಅಗ್ರಹಾರದ ಆಚೆ ಮಾಧ್ಯಮದವರು ಇದ್ದ ಹಿನ್ನೆಲೆ, ದರ್ಶನ್ ಪ್ರಯಾಣ ಮಾಡುವ ವಾಹನದ ಸಂಖ್ಯೆ ಗೊತ್ತಾಗಬಹುದು; ಪ್ರಯಾಣದ ಸಮಯದಲ್ಲಿ ಭದ್ರತೆಗೆ ತೊಂದರೆಯಾಗಬಹುದು ಎಂದು ಊಹಿಸಿ  ಪೊಲೀಸರು ದರ್ಶನ್ ಪ್ರಯಾಣ ಮಾಡುವ ವಾಹನವನ್ನು  ಬದಲಿಸಿದ್ದಾರೆ ಎನ್ನುವ ಮಾಹಿತಿ  ಲಭ್ಯವಾಗಿದೆ.

ಮೊದಲು ಪರಪ್ಪನ ಅಗ್ರಹಾರದಿಂದ ಹೊರಡುವಾಗ ದರ್ಶನ್ ಅವರನ್ನು ಬಿಳಿಬಣ್ಣದ ವ್ಯಾನ್ ನಲ್ಲಿ ಕೂರಿಸಿದ ಪೊಲೀಸರು, ಜೈಲಿಂದ ತುಸು ದೂರ ಹೋದ ನಂತರ ನೀಲಿ ಬಣ್ಣದ ಬೊಲೆರೋ ವಾಹನದಲ್ಲಿ ಅವರನ್ನು ಕರೆದೊಯ್ದರು ಎನ್ನಲಾಗಿದೆ.

ದರ್ಶನ್ ಮಾತ್ರವಲ್ಲದೇ ದರ್ಶನ್ ಅವರ ಸಂಗಡಿಗರನ್ನು ಕೂಡ ಇಂದು ಬೇರೆ ಬೇರೆ ಸ್ಥಳಕ್ಕೆ ಸ್ಥಳಾಂತರವನ್ನು ಮಾಡಲಾಗಿದೆ. A 1 ಪವಿತ್ರಾ ಗೌಡ A 13 ದೀಪಕ್ A 17 ಅನುಕುಮಾರ್ ಈ ಮೂವರನ್ನು ಮಾತ್ರ ಪರಪ್ಪನ ಅಗ್ರಹಾರದಲ್ಲಿ ಉಳಿಸಿಕೊಳ್ಳಲಾಗಿದೆ.

ಪವಿತ್ರಾ ಗೌಡ ಈಗಾಗಲೇ ಜಾಮೀನಿಗೆ ಅರ್ಜಿಯನ್ನು ಸಲ್ಲಿಸಿದ್ದು ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಆಗಸ್ಟ್ 31ಕ್ಕೆ ಮುಂದೂಡಿದೆ. ಪ್ರಕರಣದ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಸೆಪ್ಟೆಂಬರ್‌ 9ರವರೆಗೆ ಮುಂದುವರೆದಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!