ದರ್ಶನ್-ವಿಜಯಲಕ್ಷ್ಮೀ ವಿವಾಹ ಆಮಂತ್ರಣ ವೈರಲ್

ನಟ ದರ್ಶನ್  ಹಾಗೂ ವಿಜಯಲಕ್ಷ್ಮೀ ಗೆ  ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರ ವಿವಾಹ ಆಮಂತ್ರಣ  ವೈರಲ್ ಆಗಿದೆ.

ದರ್ಶನ್ ಅವರ ವಿವಾಹ ಆಮಂತ್ರಣ ಪತ್ರದಲ್ಲಿ 19-05-2003ರ ಸೋಮವಾರ ಬೆಳಿಗ್ಗೆ 9:10ರಿಂದ 9:50ರವರೆಗಿನ ಮಿಥುನ ಲಗ್ನದಲ್ಲಿ ನಾವು ವಿವಾಹವಾಗುತ್ತಿದ್ದೇವೆ. ಧರ್ಮಸ್ಥಳದ ವಸಂತ್​ ಮಹಲ್​ನಲ್ಲಿ ಮದುವೆ ನಡೆಯಲಿದೆ. ಎಲ್ಲರೂ ಮದುವೆಗೆ ಆಗಮಿಸಬೇಕು ಎಂದು ಆಮಂತ್ರಣ ಕೋರುತ್ತಿದ್ದೇವೆ. ಎಂಬುದಾಗಿ  ಬರೆಯಲಾಗಿತ್ತು.

ವಿಜಯಲಕ್ಷ್ಮೀ ಅವರನ್ನು ದರ್ಶನ್​ 2003ರ ಮೇ 19ರಂದು ಧರ್ಮಸ್ಥಳದಲ್ಲಿಸರಳವಾಗಿ ಮದುವೆ ಆದರು.  ಇವರ ದಾಂಪತ್ಯಕ್ಕೆ ಈಗ 22 ವರ್ಷ.  ವಿಜಯಲಕ್ಷ್ಮೀ ಅವರು ಸೋಶಿಯಲ್ ಮೀಡಿಯಾದಲ್ಲಿ ಪತಿ ಫೋಟೋ ಹಂಚಿಕೊಂಡು ಗಮನ ಸೆಳೆದಿದ್ದಾರೆ.

ದರ್ಶನ್ ಹಾಗೂ ವಿಜಯಲಕ್ಷ್ಮೀ ದಾಂಪತ್ಯ ಸಾಕಷ್ಟು ಏಳು ಬೀಳುಗಳನ್ನು ಕಂಡಿದೆ.  ವಿಜಯಲಕ್ಷ್ಮೀ ಎಲ್ಲಾ ಹಂತದಲ್ಲೂ  ಪತಿಯಿಂದ ಎಷ್ಟೇ ನೋವಾದರೂ ಪತಿಯ ಪರವಾಗಿ ಮಾತನಾಡಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಬಂಧನಕ್ಕೆ ಒಳಗಾದರು. ಅವರನ್ನು ಹೊರಕ್ಕೆ ತರೋಕೆ ವಿಜಯಲಕ್ಷ್ಮೀ ಅವರು ಸಾಕಷ್ಟು ಪ್ರಯತ್ನ ಮಾಡಿದರು. ಆರು ತಿಂಗಳ ಬಳಿಕ ದರ್ಶನ್​ಗೆ ಪೂರ್ಣ ಪ್ರಮಾಣದ ಜಾಮೀನು ಸಿಕ್ಕಿತು. ಆ ಬಳಿಕ ದರ್ಶನ್ ಅವರು ವಿಜಯಲಕ್ಷ್ಮೀ ಜೊತೆ  ಇದ್ದಾರೆ.

ದರ್ಶನ್ ಅವರು ‘ಡೆವಿಲ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.  ‘ಮಿಲನಾ’ ಪ್ರಕಾಶ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!