ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಜೀವನ ಅನುಭವಿಸುತ್ತಿರುವ ನಟ ದರ್ಶನ್ ಅವರು ಚಳಿಗೆ ನಿದ್ರೆ ಮಾಡಲಾಗುತ್ತಿಲ್ಲ ಎಂದು ಕೋರ್ಟ್ ಎದುರು ಅಳಲು ತೋಡಿಕೊಂಡಿದ್ದಾರೆ.
ನವೆಂಬರ್ 19ರಂದು ನಡೆದ ವಿಚಾರಣೆಗೆ ದರ್ಶನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದರು. ದರ್ಶನ್ ಆರೋಪಿಗಳ ಹಾಜರಾತಿ ಸಮಯದಲ್ಲಿ ಮೌನವಾಗಿದ್ದರು. ನಂತರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ವಕೀಲರು ಕಾಲಾವಕಾಶ ಕೋರಿದರು.
ಆರೋಪಿ ನಾಗರಾಜ್, “ಮನೆಯಿಂದ ಕಂಬಳಿ ತಂದುಕೊಟ್ಟಿದ್ದಾರೆ,.ಆದರೆ ಜೈಲಿನಲ್ಲಿ ಕೊಡುತ್ತಿಲ್ಲ. ಚಳಿ ಜಾಸ್ತಿ ಇದೆ” ಎಂದು ದೂರು ನೀಡಿದರು. ಬಳಿಕ ದರ್ಶನ್ ಮಾತನಾಡಿ, “We can’t even sleep… ತುಂಬಾ ಚಳಿ ಇದೆ. ಹೆಚ್ಚುವರಿ ಕಂಬಳಿ ಕೊಡಿಸಿ” ಎಂದು ಕೋರ್ಟ್ಗೆ ಮನವಿ ಮಾಡಿದರು.
ದರ್ಶನ್ ಅವರ ಮನವಿ ಗೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, “ಪದೇ ಪದೇ ಆದೇಶ ಮಾಡಿದ್ದರೂ ಹೀಗೇಕೆ ಮಾಡ್ತಾರೆ? ಚಳಿ ಇದ್ದಾಗ ಕಂಬಳಿ ಕೊಡಬೇಕಲ್ಲವೇ?” ಎಂದು ಜೈಲು ಅಧಿಕಾರಿಗಳತ್ತ ಪ್ರಶ್ನೆ ಮಾಡಿದರು. ದರ್ಶನ್ ಮತ್ತು ಇನ್ನಿತರ ಆರೋಪಿಗಳಿಗೆ ಕಂಬಳಿ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ಮುಂದೂಡಲಾಗಿದೆ. ತಮ್ಮ ಮೇಲೆ ಇರುವ ಎಲ್ಲಾ ಆರೋಪಗಳನ್ನು ದರ್ಶನ್ ತಿರಸ್ಕರಿಸಿರುವುದರಿಂದ ಮುಂದಿನ ವಿಚಾರಣೆಯಲ್ಲಿ ಮತ್ತಷ್ಟು ಬೆಳವಣಿಗೆ ನಿರೀಕ್ಷಿಸಲಾಗಿದೆ.
—–





Be the first to comment