ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ಸುಮಾರು 7 ತಿಂಗಳ ಕಾಲ ಜೈಲಿನಲ್ಲಿದ್ದ ನಟ ದರ್ಶನ್ ಅವರ ಗನ್ ಲೈಸೆನ್ಸ್ ತಾತ್ಕಾಲಿಕವಾಗಿ ಪೊಲೀಸರು ಅಮಾನತ್ತುಗೊಳಿಸಿದ್ದಾರೆ.
ದರ್ಶನ್ ಅವರು ಸೆಲೆಬ್ರಿಟಿ ಎಂಬ ಕಾರಣಕ್ಕೆ ಗನ್ ಇಟ್ಟುಕೊಳ್ಳಲು ಅನುಮತಿ ನೀಡಬೇಕು ಎಂದು ಕೋರ್ಟ್ ಮೊರೆ ಹೋಗಿದ್ದರು. ಆದರೆ ಕೇಸ್ ಮುಗಿಯುವವರೆಗೂ ಗನ್ ಲೈಸೆನ್ಸ್ನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿಡಲು ಪೊಲೀಸರು ನಿರ್ಧಾರ ಕೈಗೊಂಡಿದ್ದಾರೆ.
ದರ್ಶನ್ ನಾನು ಹೋದ ಕಡೆ ಬಂದ ಕಡೆ ಸಾಕಷ್ಟು ಜನ ಸೇರುತ್ತಾರೆ. ಈ ವೇಳೆ ನನ್ನ ಆತ್ಮರಕ್ಷಣೆಗೆ ಗನ್ ಬೇಕು ಎಂದಿದ್ದರು. ಈ ಬಗ್ಗೆ ಪರಶೀಲನೆ ನಡೆಸಿದ ಪೊಲೀಸರು ಪ್ರಮುಖ ಕೇಸ್ನಲ್ಲಿ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಗನ್ ಲೈಸೆನ್ಸ್ನ್ನು ಅಮಾನತ್ತಿನಲ್ಲಿಡಲು ನಿರ್ಧಾರ ಮಾಡಿದ್ದಾರೆ.
ದರ್ಶನ್ ಹೆಸರಿನಲ್ಲಿರುವ ಎರಡು ಗನ್ ಆರ್ ಆರ್ ನಗರ ಪೊಲೀಸರಿಗೆ ಹಸ್ತಾಂತರ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ದರ್ಶನ್ ರೇಣುಕಾಸ್ವಾಮಿ ಕೇಸ್ನಲ್ಲಿ ಆರೋಪಿಯಾಗಿದ್ದರಿಂದ ಗನ್ ಲೈಸೆನ್ಸ್ ಕ್ಯಾನ್ಸಲ್ ಗೆ ಪೊಲೀಸರು ಪತ್ರ ಬರೆದಿದ್ದರು. ಈ ಹಿಂದೆ ಪೊಲೀಸ್ ನೋಟಿಸ್ಗೆ ದರ್ಶನ್ ಉತ್ತರವನ್ನು ನೀಡಿದ್ದರು.
Be the first to comment