ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್ ಅವರು ಚಿಕ್ಕಣ್ಣ ಅವರನ್ನು ಭೇಟಿಯಾಗಿದ್ದು ಇದೀಗ ಚರ್ಚಗೆ ಗ್ರಾಸವಾಗಿದೆ.
ವಾಮನ ಪ್ರೀಮಿಯರ್ ಶೋ ನಲ್ಲಿ ದರ್ಶನ್ ಚಿತ್ರ ವೀಕ್ಷಣೆ ಮಾಡಿದ್ದರು. ಈ ವೇಳೆ ಚಿಕ್ಕಣ್ಣ ಹ ಆಗಮಿಸಿದ್ದು, ಇಬ್ಬರು ಮುಖಾಮುಖಿಯಾಗಿದ್ದಾರೆ. ಪ್ರಕರಣದ ಅರೋಪಿಯಾಗಿರುವ ದರ್ಶನ್, ಪ್ರಕರಣದ ಸಾಕ್ಷಿ ಚಿಕ್ಕಣ್ಣರನ್ನು ಭೇಟಿಯಾಗಿ ಮಾತಾಡಿದ್ದು ಸಾಕ್ಷಿನಾಶದ ಆರೋಪ ಕೇಳಿ ಬಂದಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಎ2 ಆರೋಪಿಯಾಗಿದ್ದಾರೆ. ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಪ್ರಮುಖ ಸಾಕ್ಷಿಯಾಗಿರುವ ಚಿಕ್ಕಣ್ಣ ಸೆಕ್ಷನ್ ಸಿಆರ್‌ಪಿಸಿ 164ರ ಅಡಿಯಲ್ಲಿ ಜಡ್ಜ್ ಎದುರು ಈಗಾಗಲೇ ಹೇಳಿಕೆ ನೀಡಿದ್ದಾರೆ. ಹೇಳಿಕೆ ನೀಡಿದ ನಂತರ ಚಿಕ್ಕಣ್ಣ ದರ್ಶನ್ ಅವರನ್ನು ಭೇಟಿ ಮಾಡಿದ್ದರು. ಅಂದು ತನಿಖಾ ಹಂತದಲ್ಲಿರುವಾಗ ಚಿಕ್ಕಣ್ಣ ದರ್ಶನ್ ಅವರನ್ನು ಭೇಟಿ ಮಾಡಿದ್ದಕ್ಕೆ ನೋಟಿಸ್ ನೀಡಲಾಗಿತ್ತು. ಇದೀಗ ಮತ್ತೆ ಚಿಕ್ಕಣ್ಣ-ದರ್ಶನ್ ಭೇಟಿಯಾಗಿರುವುದು ಚರ್ಚೆಯಾಗುತ್ತಿದೆ.
ತೀವ್ರ ಬೆನ್ನು ನೋವಿನ ಕಾರಣ ನೀಡಿ ದರ್ಶನ್ ಬುಧವಾರ ಕೋರ್ಟ್ ವಿಚಾರಣೆ ಗೈರಾಗಿದ್ದರು. ಇದರಿಂದಾಗಿ ಅಸಮಾಧಾನಗೊಂಡಿದ್ದ ಕೋರ್ಟ್ ದರ್ಶನ್ ಪರ ವಕೀಲರಿಗೆ ಗೈರಾಗಿದ್ದರ ಕುರಿತು ಕ್ಲಾಸ್ ತೆಗೆದುಕೊಂಡಿತ್ತು.
—–

Be the first to comment