ದರ್ಶನ್ ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್  ಜೈಲಿನಲ್ಲಿ ಕನಿಷ್ಠ ಸೌಲಭ್ಯಗಳನ್ನು ಒದಗಿಸುವಂತೆ ಕೋರಿ ಸಲ್ಲಿಸಿದ  ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ 57ನೇ ಸಿಎಂಎಂ ಕೋರ್ಟ್ ಸೆಪ್ಟೆಂಬರ್ 25ಕ್ಕೆ ಮುಂದೂಡಿದೆ.

ದರ್ಶನ್ ಅವರು ಹಾಸಿಗೆ, ತಲೆದಿಂಬು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಸೆಪ್ಟೆಂಬರ್ 19ರಂದು ತೀರ್ಪು ನೀಡಬೇಕಿದ್ದ ಕೋರ್ಟ್ ವಿಚಾರಣೆಯನ್ನು 25ಕ್ಕೆ ಮುಂದೂಡಿದೆ. ಇದರಿಂದ ದರ್ಶನ್‌ಗೆ ತಕ್ಷಣದ ಸೌಲಭ್ಯ ದೊರೆಯುವ ಸಾಧ್ಯತೆ ಕುಂಠಿತವಾಗಿದೆ.

ದರ್ಶನ್ ಅವರು ಮೂಲಭೂತ ಸೌಕರ್ಯಗಳನ್ನು ಜೈಲಾಧಿಕಾರಿಗಳಿಗೆ ಅವುಗಳನ್ನು ಒದಗಿಸಲು ಆದೇಶಿಸಿದ್ದರೂ ಕೋರ್ಟ್ , ಆದೇಶ ಇಂದಿಗೂ ಅನುಷ್ಠಾನವಾಗಿಲ್ಲ ಎಂದು ದೂರಿದ್ದರು.

ಜೈಲಿನಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ ಜೀವನ ಕಷ್ಟಕರವಾಗುತ್ತಿದೆ ಎಂದು ದರ್ಶನ್ ತಮ್ಮ ಎರಡನೇ ಅರ್ಜಿಯಲ್ಲಿ ತಿಳಿಸಿದ್ದಾರೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧನದಲ್ಲಿರುವ   ದರ್ಶನ್‌ಗೆ  ಅರ್ಜಿ ವಿಚಾರಣೆ ಮುಂದೂಡಿ ನಿರಾಸೆಯಾಗಿದೆ.

ದರ್ಶನ್ ಜೈಲು ಸೇರಿ ಒಂದು ತಿಂಗಳು ಕಳೆದು ಹೋಗಿದೆ. ಕನಿಷ್ಠ ಸೌಲಭ್ಯವನ್ನೂ ನೀಡಿಲ್ಲ. ಜೈಲು ಸೇರಿ ತಿಂಗಳಾದ್ರೂ ಕ್ವಾರಂಟೈನ್ ಸೆಲ್‌ನಲ್ಲಿ ಇಟ್ಟಿದ್ದಾರೆಂದು ಸುನೀಲ್ ವಾದ ಮಂಡಿಸಿದ್ದಾರೆ.

—-

 

 

Be the first to comment

Leave a Reply

Your email address will not be published. Required fields are marked *

Translate »
error: Content is protected !!