ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಜೈಲಿನಲ್ಲೇ ಸಾಯಬೇಕಾ ಎಂದು ಕೂಗಾಡಿದ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ದರ್ಶನ್ಗೆ ನೀಡಲಾಗುತ್ತಿರುವ ಕನಿಷ್ಠ ಸೌಲಭ್ಯಗಳ ಕುರಿತು ಕಾನೂನು ಪ್ರಾಧಿಕಾರ ಸಲ್ಲಿಸಿದ ವರದಿ ದರ್ಶನ್ ವಿರುದ್ಧವಾಗಿದೆ. ಈ ವರದಿ ತಿಳಿದ ಕ್ಷಣದಲ್ಲೇ ದರ್ಶನ್ ಜೈಲಿನೊಳಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ನಾನು ಯಾರಿಗೆ ಅನ್ಯಾಯ ಮಾಡಿದ್ದೇನೆ? ನನಗೆ ಯಾಕೆ ಈ ಶಿಕ್ಷೆ? ಹೀಗೆ ಜೈಲಿನಲ್ಲೇ ಸಾಯಬೇಕಾ? ಎಂದು ಕೂಗಾಡಿದ ಘಟನೆ ನಡೆದಿದೆ.
ತಾಳ್ಮೆಯಿಂದ ಇದ್ದ ದರ್ಶನ್ ಕಾನೂನು ಪ್ರಾಧಿಕಾರ ಸಲ್ಲಿಸಿದ ವರದಿ ವಿಚಾರ ತಿಳಿದು ತಾಳ್ಮೆ ಕಳೆದುಕೊಂಡಿದ್ದಾರೆ. ಅವರ ಕೋಪ ನೋಡಿ ಸಹಚರರು ಬೆಚ್ಚಿಬಿದ್ದಿದ್ದಾರೆ. ಮ್ಯಾನೇಜರ್ ನಾಗರಾಜ್ , ದರ್ಶನ್ ನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ.
ದರ್ಶನ್ ಕೆಲ ಹೊತ್ತಿನ ಬಳಿಕ ಮೌನ ವಹಿಸಿ ಯಾರೊಂದಿಗೂ ಮಾತನಾಡದೆ ಒಂಟಿಯಾಗಿ ಕುಳಿತಿದ್ದರು ಎಂದು ಹೇಳಲಾಗಿದೆ. ಈ ಘಟನೆಯ ಬಳಿಕ ದರ್ಶನ್ ಮಾನವ ಹಕ್ಕು ಆಯೋಗದ ಮೊರೆ ಹೋಗಲು ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.
ದರ್ಶನ್ ವಕೀಲರೊಂದಿಗೆ ಚರ್ಚೆ ನಡೆಸಿ, ಸೋಮವಾರದೊಳಗೆ ಅಧಿಕೃತವಾಗಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
—-





Be the first to comment