ಐತಿಹಾಸಿಕ ಸಿನಿಮಾದತ್ತ ಹೊರಳಿದ ಡಾರ್ಲಿಂಗ್ ಕೃಷ್ಣ

ಪ್ರಣಯ ಹಾಗೂ ಕೌಟುಂಬಿಕ ಸಿನಿಮಾಗಳಿಗೆ ಹೆಸರುವಾಸಿಯಾದ ಡಾರ್ಲಿಂಗ್ ಕೃಷ್ಣ, ‘ಹಲಗಲಿ’ ಎಂಬ ಚಿತ್ರದ ಮೂಲಕ ಐತಿಹಾಸಿಕ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ.

ಸುಕೇಶ್ ನಾಯಕ್ ನಿರ್ದೇಶನದ ಚಿತ್ರವು ಐತಿಹಾಸಿಕ ವಿಷಯಗಳ ಬಗ್ಗೆ ಮಾಹಿತಿ ನೀಡಲಿದೆ. ಸ್ವಾತಂತ್ರ್ಯ ಪೂರ್ವದ ಅವಧಿಯಲ್ಲಿ ಅಂದರೆ  1857 ರಲ್ಲಿ ಬ್ರಿಟಿಷರ ಕಾಲದಲ್ಲಿ ನಡೆದ ಕಥೆ ಇದಾಗಲಿದೆ. 2018 ರಲ್ಲಿ ತೆರೆ ಕಂಡ ಕೃಷ್ಣ ತುಳಸಿ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ಸುಕೇಶ್ ನಾಯಕ್ ಈಗ ತಮ್ಮ ಎರಡನೇ ಸಿನಿಮಾ ಡೈರೆಕ್ಷನ್ ಗೆ ಮುಂದಾಗಿದ್ದಾರೆ.

1857 ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಐತಿಹಾಸಿಕ ಸಂದರ್ಭದಲ್ಲಿ, ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಸಣ್ಣ ಹಳ್ಳಿಯಾದ ಹಲಗಲಿಯ ಕೆಚ್ಚೆದೆಯ ನಿವಾಸಿಗಳು ಅಸಾಧಾರಣ ಶೌರ್ಯವನ್ನು ಪ್ರದರ್ಶಿಸಿದರು. ಬ್ರಿಟಿಷರು ಜಾರಿಗೆ ತಂದಿದ್ದ ನಿಶಸ್ತ್ರೀಕರಣದ ವಿರುದ್ಧ ಸೆಡ್ಡು ಹೊಡೆದು ನಿಂತಿದ್ದ ಹಲಗಲಿ ಬೇಡರು ಆಂಗ್ಲರ ವಿರುದ್ಧ ನೇರ ಯುದ್ಧಕ್ಕೆ ಇಳಿದಿದ್ದರು. ಹುಟ್ಟು ವೀರರಾಗಿದ್ದ ಹಲಗಲಿ ಬೇಡರನ್ನು ಸೋಲಿಸುವುದು ಬ್ರಿಟಿಷರಿಗೆ ಸುಲಭವಾಗಿರಲಿಲ್ಲ. ಬೇಡ ಸಮುದಾಯವು ಬ್ರಿಟಿಷರನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.

ನನ್ನ ಕಥೆಯು ಈ ಬೇಟೆಗಾರ ಸಮುದಾಯವನ್ನು ಆಧರಿಸಿದೆ. ನೈಜ ಘಟನೆಗಳನ್ನು ಕಾಲ್ಪನಿಕ ಅಂಶಗಳೊಂದಿಗೆ ಸಂಯೋಜಿಸಲಾಗಿದೆ ಎಂದು ಸುಕೇಶ್ ಹೇಳಿದ್ದಾರೆ.

ಈ ಚಿತ್ರಕಥೆ ಬರೆಯಲು ಸುಕೇಶ್ ಎರಡೂವರೆ ವರ್ಷಗಳನ್ನು ತೆಗೆದುಕೊಂಡಿದ್ದಾರೆ. ಸುಕೇಶ್ ಸದ್ಯ ಉತ್ತರ ಕರ್ನಾಟಕದ ಲೊಕೇಶನ್ ಗಳನ್ನು ಗುರುತಿಸುತ್ತಿದ್ದು, ಜನವರಿಯಲ್ಲಿ ಚಿತ್ರೀಕರಣ ಆರಂಭಿಸುವ ಪ್ಲಾನ್ ಹಾಕಿಕೊಂಡಿದ್ದಾರೆ.

ನಾವು ಬಾಗಲಕೋಟೆ ಮತ್ತು ಸುತ್ತಮುತ್ತಲಿನ ಸ್ಥಳಗಳನ್ನು ಅಂತಿಮಗೊಳಿಸುತ್ತಿದ್ದೇವೆ. ಅಲ್ಲಿ ನಾವು ಸೆಟ್ಗಳನ್ನು ರಚಿಸುತ್ತೇವೆ ಎಂದಿದ್ದಾರೆ ಸುಕೇಶ್.

ಕಲ್ಯಾಣ್ ಚಕ್ರವರ್ತಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ತೆಲುಗು ಚಲನಚಿತ್ರ ನಿರ್ಮಿಸಿದ ನಂತರ ಕನ್ನಡ ಚಲನಚಿತ್ರೋದ್ಯಮದಲ್ಲಿ ಮೊದಲ ಬಾರಿಗೆ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಐತಿಹಾಸಿಕ ಸಿನಿಮಾಗಳನ್ನು ಎರಡು ಭಾಗಗಳಲ್ಲಿ ತರಲು ಯೋಜಿಸಲಾಗಿದೆ. ಇದು ಕೃಷ್ಣ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ಕೃಷ್ಣ ಸಿನಿಮಾದ ಪಾತ್ರಕ್ಕಾಗಿ ತಮ್ಮ ದೇಹವನ್ನು ಪರಿವರ್ತಿಸುವತ್ತ ಗಮನಹರಿಸಿದ್ದಾರೆ.ಕುದುರೆ ಸವಾರಿ  ಮತ್ತು ಬೇಟೆಗಾರರ ಸ್ಟಂಟ್ ಕಲಿಯುತ್ತಿದ್ದಾರೆ.

ಸಿನಿಮಾದ ಕಲಾವಿದರ ಆಯ್ಕೆ ನಡೆಯುತ್ತಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ರವಿ ಕುಮಾರ್ ಸನಾ ಛಾಯಾಗ್ರಾಹಣವಿದೆ.

ಶುಗರ್ ಫ್ಯಾಕ್ಟರಿ ಬಿಡುಗಡೆಗಾಗಿ ಎದುರು ನೋಡುತ್ತಿರುವ ಕೃಷ್ಣ,  ತಮ್ಮ ನಿರ್ದೇಶನದ ಲವ್ ಮಾಕ್ಟೇಲ್ 3 ನಲ್ಲಿ ಕೆಲಸ ಮಾಡುತ್ತಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!