ಪೂರ್ಣಚಂದ್ರ ತೇಜಸ್ವಿ ಅವರ ಕೃತಿ ಆಧರಿಸಿದ ‘ಡೇರ್ಡೆವಿಲ್ ಮುಸ್ತಫಾ’ ಚಿತ್ರ ಕೋಮುದ್ವೇಷ, ಜಗಳ ಎಷ್ಟು ಕ್ಷುಲ್ಲಕ ಎಂಬುದನ್ನು ತಿಳಿಸುವ ಯತ್ನ ಮಾಡಿದೆ.
ಸಿನಿಮಾದ ಮೂಲಕ ನಿರ್ದೇಶಕ ಶಶಾಂಕ್ ಸೋಗಾಲ್ ಅವರು ಅಬಚೂರಿನ ಪರಿಸರವನ್ನು ತೆರೆಗೆ ತರುವ ಯತ್ನದ ಜೊತೆಗೆ ಉತ್ತಮವಾದ ಸಂದೇಶವನ್ನೂ ನೀಡುವ ಕೆಲಸ ಮಾಡಿದ್ದಾರೆ.
ಸಿನಿಮಾ ಪ್ರೇಕ್ಷಕರನ್ನು ರೆಟ್ರೋ ಕಾಲಕ್ಕೆ ಕರೆದುಕೊಂಡು ಹೋಗುತ್ತದೆ. ಒಂದೇ ಊರಿನಲ್ಲಿ ಬೇರೆ ಧರ್ಮದ ಜನರು ಇದ್ದಾಗ ಭಿನ್ನಾಭಿಪ್ರಾಯಗಳು ಇರುತ್ತವೆ. ಹೊಂದಿಕೊಂಡು ಬಾಳಿದರೆ ಒಗ್ಗಟ್ಟಿನಿಂದ ಉತ್ತಮ ಸಮಾಜವನ್ನು ಕಟ್ಟಬಹುದು ಎನ್ನುವ ಸಂದೇಶವನ್ನು ಈ ಸಿನಿಮಾ ನೀಡುತ್ತದೆ.
ಹಿಂದೂಗಳೇ ತುಂಬಿರುವ ಕಾಲೇಜಿಗೆ ಒಬ್ಬ ಮುಸ್ಲಿಂ ಹುಡುಗ ಸೇರಿಕೊಂಡರೆ ಏನಾಗುತ್ತದೆ? ಲವ್ ಹುಟ್ಟಿಕೊಂಡರೆ ಏನಾದೀತು? ಕಾಲೇಜಿನ ಹಿಂದೂ ಹುಡುಗರ ವಿರುದ್ಧ ಮುಸ್ಲಿಂ ಕೇರಿಯ ಯುವಕರು ಬಾಜಿ ಕಟ್ಟಿ ಕ್ರಿಕೆಟ್ ಆಡಲು ಬಂದರೆ ಏನೆಲ್ಲ ನಡೆಯಬಹುದು? ಎನ್ನುವ ಕಥೆ ‘ಡೇರ್ಡೆವಿಲ್ ಮುಸ್ತಫಾ’ ದಲ್ಲಿದೆ.
ರಾಮಾನುಜ ಅಯ್ಯಂಗಾರಿ ಪಾತ್ರದಾರಿ ಆದಿತ್ಯ ಆಶ್ರೀ ಮತ್ತು ಮುಸ್ತಫಾ ಪಾತ್ರದಾರಿ ಶಿಶಿರಾ ಬೈಕಾಡಿ ನಡುವಿನ ಜಿದ್ದಾ ಜಿದ್ದಿ ದೃಶ್ಯಗಳು ಮನರಂಜನೆ ನೀಡುತ್ತವೆ. ಮಂಡ್ಯ ರಮೇಶ್, ಉಮೇಶ್, ನಾಗಭೂಷಣ್ ನಗಿಸುತ್ತಾರೆ.
2 ಗಂಟೆ 40 ನಿಮಿಷದ ಚಿತ್ರ ಬೋರು ಹೊಡೆಸದ ರೀತಿಯಲ್ಲಿ ಸಾಗುತ್ತದೆ.
____
Be the first to comment