ಮೋಹನ್ ಲಾಲ್ ನಟನೆಯ ಚಿತ್ರದಲ್ಲಿ ಕನ್ನಡದ ನಟ, ಸ್ಟ್ಯಾಂಡಪ್ ಕಾಮಿಡಿಯನ್ ಡ್ಯಾನಿಶ್ ಸೇಟ್ ಆಕ್ಟ್ ಮಾಡಲಿದ್ದಾರೆ.
ಚಿತ್ರಕ್ಕೆ ಮಲೈಕೊಟ್ಟೈ ವಾಲಿಬನ್ ಎಂದು ಶೀರ್ಷಿಕೆ ಇಡಲಾಗಿದೆ. ಮಲೈಕೊಟ್ಟೈ ವಾಲಿಬನ್ ಸಿನಿಮಾ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ.
‘2023ನೇ ವರ್ಷ ಲೆಜೆಂಡರಿ ಮೋಹನ್‌ಲಾಲ್ ಮತ್ತು ಜೀನಿಯಸ್ ಲಿಜೋ ಜೋಸ್ ಪೆಲ್ಲಿಸ್ಸೆರಿ ಅವರೊಂದಿಗೆ ಪ್ರಾರಂಭವಾಗುತ್ತದೆ. ಇಡೀ ಸಿಬ್ಬಂದಿಯೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ’ ಎಂದು ಡ್ಯಾನಿಶ್ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಹಂಬಲ್ ಪೊಲಿಟಿಷಿಯನ್ ನೊಗರಾಜ್, ಫ್ರೆಂಚ್ ಬಿರಿಯಾನಿ ಮತ್ತು ಒನ್ ಕಟ್ ಟು ಕಟ್ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ಡ್ಯಾನಿಶ್ ಅವರು ಗಮನಾರ್ಹ ಪಾತ್ರಗಳನ್ನು ಮಾಡಿದ್ದಾರೆ.
ಪಿಎಸ್ ರಫೀಕ್ ಚಿತ್ರಕಥೆ ಬರೆದಿರುವ ಮಲೈಕೊಟ್ಟೈ ವಾಲಿಬನ್ ಸಿನಿಮಾದಲ್ಲಿ ನಟ ಮೋಹನ್ ಲಾಲ್ ಅವರು ಕುಸ್ತಿಪಟುವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಚಿತ್ರತಂಡ ಸದ್ಯ ರಾಜಸ್ಥಾನದಲ್ಲಿ ಲೊಕೇಶನ್ ಹುಡುಕುವಲ್ಲಿ ನಿರತವಾಗಿದೆ. ಚಿತ್ರದ ಬಹುತೇಕ ಚಿತ್ರೀಕರಣ ಅಲ್ಲಿಯೇ ನಡೆಯಲಿದೆ. ತಾಂತ್ರಿಕ ತಂಡದಲ್ಲಿ ಹಿರಿಯ ಛಾಯಾಗ್ರಾಹಕ ಮಧು ನೀಕಂದನ್, ಸಂಗೀತ ನಿರ್ದೇಶಕ ಪ್ರಶಾಂತ್ ಪಿಳ್ಳೈ, ಸಂಕಲನಕಾರ ದೀಪು ಜೋಸೆಫ್ ಇದ್ದಾರೆ.
ಜಾನ್ & ಮೇರಿ ಕ್ರಿಯೇಟಿವ್, ಅಮೆನ್ ಮೂವಿ ಮೊನಾಸ್ಟರಿ, ಸೆಂಚುರಿ ಫಿಲ್ಮ್ಸ್ ಮತ್ತು ಮ್ಯಾಕ್ಸ್ ಲ್ಯಾಬ್ ಜಂಟಿಯಾಗಿ ಚಿತ್ರಕ್ಕೆ ಬೆಂಬಲ ನೀಡುತ್ತಿದ್ದು, ಮುಂದಿನ ವರ್ಷ ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ.
___

Be the first to comment