ಜೀ ಕನ್ನಡದಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸಿಸನ್ -೨ ಆರಂಭ

ಒಂದು ವರ್ಷದ ನಂತರ ಜೀ ಕನ್ನಡ ವಾಹಿನಿ ಡಾನ್ಸ್‌ ಕರ್ನಾಟಕ ಡಾನ್ಸ್‌ ಫ್ಯಾಮಿಲಿ ವಾರ್‌-2’ವನ್ನು ಆಂಭಿಸಿದೆ. ಅನುಶ್ರೀ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಈ ಕಾರ್ಯಕ್ರಮದ ತೀರ್ಪುಗಾರರು ರಕ್ಷಿತಾ ಪ್ರೇಮ್, ಅರ್ಜುನ್ ಜನ್ಯ ಹಾಗೂ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ.ಹೋಸ ಸೀಸನಿನಲ್ಲಿ ಜೀ ಕನ್ನಡ ಕುಟುಂಬದ ಪ್ರಮುಖ ತಾರೆಗಳು ಪಾಲ್ಗೊಂಡು ವೀಕ್ಷಕರನ್ನು ಮನರಂಜಿಸಲಿದ್ದಾರೆ.

ಕರ್ನಾಟಕದ ನಗರ ಮತ್ತು ಗ್ರಾಮೀಣ ಮಾರುಕಟ್ಟೆಯಲ್ಲಿ 7.5 ಟಿಆರ್ ಪಿ ಗಳಿಸಿದೆ, ಜೀ ಕನ್ನಡದ ಅತ್ಯಂತ ಜನಪ್ರಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹೊಸ ಸೀಸನಿನ್ನೊಂದಿಗೆ ಹೆಚ್ಚಿನ ಉತ್ಸಾಹವನ್ನೂ ತರಲಿದೆ.

ಈ ಬಾರಿ ಜನಪ್ರಿಯ ಧಾರವಾಹಿಗಳ ಮತ್ತು ರಿಯಾಲಿಟಿ ಶೋನವರು ಸೇರಿ ಒಟ್ಟು 12 ಮಂದಿ ಕಪ್‌ಗಾಗಿ ಡಾನ್ಸ್‌ ಮಾಡಲಿದ್ದಾರೆ.

ಪ್ರೇಕ್ಷೀತ್‌-ಅನ್ವಿಷ, ಲೋಕಿ-ಮಂಥನ, ಸುಬ್ಬು-ಪ್ರಣತಿ, ಬರ್ಕತ್‌ ಅಲಿ-ನಿಂಗಿ, ಪ್ರೀತಂ-ಅನಿಖಾ, ಹನುಮಂತ-ಶೈನಿ, ಅನುಪಮಾ ಭಟ್‌-ನಂದಿತಾ , ಅನೂಪ್‌-ಡಿಂಪನ, ವಿಕ್ರಾಂತ್‌-ಅದಿತಿ, ಸೂರಜ್‌-ಮಿಂಚು ವಿವೇಕ್‌-ಹಿರಣ್ಮಯಿ ಅಶೋಕ್‌-ಭವಾನಿ ಈ ಬಾರಿಯ ಸ್ಫರ್ಧಿಗಳಾಗಿದ್ದಾರೆ. ಇನ್ನು ಈ ಕಾರ್ಯಕ್ರಮ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9.30ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.

ಕ್ರೇಜಿ ಕ್ವೀನ್ ರಕ್ಷಿತಾ ಚಿನ್ನಾರಿ ಮುತ್ತಾ ವಿಜಯ ರಾಘವೇಂದ್ರ ಸಂಗೀತ ಸಂಯೋಜಕ ಅರ್ಜುನ್ ಜನ್ಯ ಅವರು ಈ ಕಾರ್ಯಕ್ರಮದ ತೀರ್ಪುಗಾರರಾಗಿದ್ದು, ಜನಪ್ರಿಯ ನಿರೂಪಕಿ ಅನುಶ್ರೀ ಆಯೋಜಿಸಲಿದ್ದಾರೆ.
ಇದೇ ಜುಲೈ 20ರಿಂದ‌  ಆರಂಭವಾಗಲಿದೆೆ.

This Article Has 1 Comment
  1. Pingback: Best Roof Guy Lincoln CA

Leave a Reply

Your email address will not be published. Required fields are marked *

Translate »
error: Content is protected !!