ಓಣಂಹಬ್ಬದಂದು ದಾಮಾಯಣದ ಟೀಸರ್ ಬಿಡುಗಡೆ

ಕನ್ನಡದಲ್ಲಿ ‘ವಾಸ್ತವಿಕ ಹಾಸ್ಯ’ದ ಚಲನಚಿತ್ರವೊಂದನ್ನು ನೋಡುವ ಕಾತರತೆಗೆ ಸಧ್ಯದಲ್ಲೇ ತೃಪ್ತಿ ಸಿಗುವಂತಿದೆ. ಮಂಗಳೂರಿನ ಸೊಗಡಿನಲ್ಲಿ ತಯಾರಾದ ಚಲನಚಿತ್ರ ‘ದಾಮಾಯಣ’- ಕನ್ನಡ ಸಿನಿ ರಸಿಕರಿಗೆ ಸಿಹಿ ಸುದ್ದಿ ತಂದಿದೆ.ಕುತೂಹಲಕಾರಿಯಾದಮೊದಲ ಪೋಸ್ಟರ್ ಬಿಡುಗಡೆಯ ಬಹಳ ಸಮಯದ ನಂತರ, ಓಣಂ ಹಬ್ಬದ ದಿನವಾದ ಸೆಪ್ಟೆಂಬರ್ 11 ರಂದು ‘ದಾಮಾಯಣ ತಂಡ’ವು ಚಿತ್ರದ ಟೀಸರ್ ಬಿಡುಗಡೆ ಮಾಡಲಿದೆ. ಇಲ್ಲಿಯ ವರೆಗೆ ಕಾತರದಿಂದ ಅಭಿಮಾನಿಗಳನ್ನು ಕಾಯಿಸಿದ ತಂಡವು 2019ರ ಏಪ್ರಿಲ್ ತಿಂಗಳಿನಲ್ಲಿಯೇ ಮೊದಲ ಪೋಸ್ಟರ್ ಬಿಡುಗಡೆ ಮಾಡಿತ್ತು.

ತಂಡವು ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್‍ಗೆ ಅಣಿಯಾಗುವ ಮೊದಲು ಹೊಸತನವನ್ನು ಕಾಯ್ದಿರಿಸುವ ನಿಟ್ಟಿನಲ್ಲಿ ಸಣ್ಣದೊಂದು ವಿರಾಮ ತೆಗೆದುಕೊಂಡಿತ್ತು. ಚಲನಚಿತ್ರ್ರ ‘ದಾಮಾಯಣ’ವು ಬಹುತೇಕ ಸಂಪೂರ್ಣಗೊಂಡಿರುವ ಈ ಸಂದರ್ಭವು ಆಕರ್ಷಕವಾದ ಟೀಸರ್ ಬಿಡುಗಡೆಗೆ ಸಕಾಲ ಎಂಬುದು ಯುವ ತಂಡದ ಅಭಿಪ್ರಾಯ.

“ದಾಮಾಯಣದ ಟೀಸರ್ ‘ಒಂದು ವರೆ ನಿಮಿಷದ ಹಾಸ್ಯದ ಕಟ್ಟು. ಪೋಸ್ಟರ್‍ನಲ್ಲಿನ ಹಲವಾರು ಪ್ರಶ್ಣೆಗಳಿಗೆ ಇಲ್ಲಿ ಉತ್ತರ ಸಿಗಲಿದೆ. ಚಿತ್ರದ ಕುರಿತ ಪ್ರಭಾವ ಬೀರಲು ‘ಟೀಸರ್’ ಒಂದು ಅದ್ಭುತ ಸಾಧನವಾಗಲಿದೆ.” ಎಂದು ನಿರ್ದೇಶಕ ಶ್ರೀಮುಖ ಹೇಳಿದರು. ಟೀಸರ್ ‘ಲಹರಿ ಮ್ಯೂಸಿಕ್’ನ ಯೂ-ಟ್ಯೂಬ್ ಚಾನೆಲ್‍ನಲ್ಲಿ ಸೆಪ್ಟೆಂಬರ್ 11ರ ಸಂಜೆ 6 ಗಂಟೆಯ ನಂತರದಲ್ಲಿ ಲಭ್ಯವಿರಲಿದೆ.

ಚಿತ್ರತಂಡವು ಪ್ರಚಾರ ಕಾರ್ಯವನ್ನು ಪ್ರಾರಂಭಿಸಿದೆ ಹಾಗೂ ಸೆನ್ಸಾರ್ ಗೆ ಸಿದ್ದತೆ ನಡೆಸುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!