‘ಕೊರಗಜ್ಜ’ ಸಿನಿಮಾದ ಪ್ರಚಾರಕ್ಕಾಗಿ ಹಾಡುಗಳಿಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡವರಿಗೆ ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿರುವುದಕ್ಕೆ ಕೊಡಗು ಜಿಲ್ಲಾ ದೈವ ನರ್ತಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸುಧೀರ್ ಅತ್ತಾವರ್ ನಿರ್ದೇಶನದ ‘ಕೊರಗಜ್ಜ’ ಸಿನಿಮಾದ ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿದೆ. ಸಿನಿಮಾದ ಆರು ಹಾಡುಗಳಿಗೂ ಉತ್ತಮ ರೀಲ್ಸ್ ಆಯ್ಕೆ ಮಾಡಿ ಬಹುಮಾನ ವಿತರಣೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.
ತುಳುನಾಡಿನ ಆರಾಧ್ಯ ದೈವವಾಗಿರುವ ಕೊರಗಜ್ಜನ ಕುರಿತಾಗಿ ರೀಲ್ಸ್ ಮಾಡಿ ಲೈಕ್ಸ್ ಹಾಗೂ ವೀವ್ಸ್‌ಗಳ ಆಧಾರದಲ್ಲಿ ಬಹುಮಾನ ನೀಡುವ ಕ್ರಮ ದೈವಕ್ಕೆ ಅವಮಾನ ಮಾಡುವಂತಿದೆ ಎಂದು ದೈವ ನರ್ತಕರು ವಿರೋಧ ವ್ಯಕ್ತಪಡಿಸಿದ್ದಾರೆ.
‘ಕಾಂತಾರ’ ಸಿನಿಮಾದ ಬಳಿಕ ದೈವದ ವೇಷಭೂಷಣ ಹಾಕಿಕೊಂಡು ಅನಗತ್ಯ ರೀಲ್ಸ್ ಮಾಡುವ ಪ್ರವೃತ್ತಿ ಹೆಚ್ಚಾಗಿತ್ತು. ಈಗ ಮತ್ತೆ ಇದೇ ಪ್ರವೃತ್ತಿ ಮರುಕಳಿಸುವ ಯತ್ನ ನಡೆಯುತ್ತಿದೆ. ಈ ರೀತಿಯ ತಪ್ಪು ಮುಂದುವರಿದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ದೈವದ ಮೊರೆ ಹೋಗುವುದಾಗಿ ದೈವ ನರ್ತಕರ ಸಂಘ ಎಚ್ಚರಿಕೆ ನೀಡಿದೆ.
ಈ ವಿಷಯದಲ್ಲಿ ಕಾನೂನು ಹೋರಾಟಕ್ಕೂ ಮುಂದಾಗುವುದಾಗಿ ಜಿಲ್ಲಾ ದೈವ ನರ್ತಕರ ಸಂಘದ ಪ್ರಮುಖರು ತಿಳಿಸಿದ್ದಾರೆ.
—





Be the first to comment