ಎ ಆರ್ ಸಾಯಿರಾಮ್ ನಿರ್ದೇಶನದ ‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರ ಫೆಬ್ರವರಿ 23 ರಂದು ಬೆಳ್ಳಿ ಪರದೆಯ ಮೇಲೆ ಬರಲು ಸಜ್ಜಾಗಿದೆ.
ಸಂಭಾಷಣೆ ಬರಹಗಾರರಾಗಿ ಕೆಲಸ ಮಾಡಿರುವ ಎ ಆರ್ ಸಾಯಿರಾಮ್ ಅವರು ಧೈರ್ಯಂ ಸರ್ವತ್ರ ಸಾಧನಂ ಚಿತ್ರದ ಮೂಲಕ ಚೊಚ್ಚಲ ನಿರ್ದೇಶನ ಮಾಡಿದ್ದಾರೆ. ಚಿತ್ರ ಕೊರಟಗೆರೆ ತಾಲೂಕಿನ ಹಳ್ಳಿಯಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದೆ.
“ತಂದೆ ಮತ್ತು ಮಗನ ಸುತ್ತ ಸುತ್ತುವ ಈ ಚಿತ್ರ ಕಥೆಯು 1960 ರ ದಶಕದಲ್ಲಿ ನನ್ನ ಜನ್ಮಸ್ಥಳದಲ್ಲಿ ನಡೆದ ನೈಜ ಘಟನೆಯಾಗಿದೆ. ನಾನು ಬೆಳೆಯುತ್ತಿರುವಾಗ, ನನ್ನ ಹಳ್ಳಿಯಲ್ಲಿ ಈ ಘಟನೆಯ ಕಥೆಗಳನ್ನು ನಾನು ಆಗಾಗ ಕೇಳುತ್ತಿದ್ದೆ. ನೈಜ ಘಟನೆ ಉಳಿವಿಗಾಗಿ ತಂದೆಯ ಹೋರಾಟವನ್ನು ಎತ್ತಿ ತೋರಿಸುತ್ತದೆ. ವಿಷಯವು 60 ರ ದಶಕದ್ದಾಗಿದ್ದರೂ, ನಾನು ಅದನ್ನು 2015-2017 ರಲ್ಲಿ ನಡೆಯುವಂತೆ ಮಾರ್ಪಡಿಸಿದ್ದೇನೆ. ಅದಕ್ಕೆ ತಕ್ಕಂತೆ ಕಥೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ” ಎಂದುಸಾಯಿರಾಂ ಹೇಳಿದ್ದಾರೆ.
ಆನಂದ್ ಬಾಬು ಜಿ ನಿರ್ಮಿಸಿದ ಚಿತ್ರದಲ್ಲಿ ಹೊಸಬರಾದ ವಿವಾನ್ ಕೆಕೆ, ಅನುಷಾ ರೈ ಮತ್ತು ಬಾಲರಾಜ್ ವಾಡಿ, ವರ್ಧನ್ ತೀತಹಳ್ಳಿ, ರಾಮ ನಾಯ್ಕ್, ಪ್ರದೀಪ್ ಪೂಜಾರಿ, ರಾಮ್ ಪವನ್, ಅರ್ಜುನ್ ಪಾಳೇಗಾರ್ ನಟಿಸಿದ್ದಾರೆ. ಚಿತ್ರಕ್ಕೆ ಜುಡಾ ಸ್ಯಾಂಡಿ ಸಂಗೀತ ನೀಡಿದ್ದು, ರವಿಕುಮಾರ್ ಸನಾ ಛಾಯಾಗ್ರಹಣ ಮಾಡಿದ್ದಾರೆ.
Be the first to comment