‘ದಬಾಂಗ್ 3’ ಚಿತ್ರದಲ್ಲಿ ಕಿಚ್ಚ

ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ‘ದಬಾಂಗ್ 3’ ಸಿನಿಮಾದ ಟ್ರೈಲರ್ ಬುಧವಾರ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಟ್ರೈಲರ್ ನಲ್ಲಿ ಕಿಚ್ಚ ಸುದೀಪ್ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

‘ದಬಾಂಗ್ 3’ ಟ್ರೈಲರ್ ಚೆನ್ನೈ, ಹೈದರಬಾದ್, ಮುಂಬೈ ಹಾಗೂ ಕರ್ನಾಟಕದಲ್ಲಿ ಏಕಕಾಲದ ವಿಡಿಯೋ ಸ್ಟ್ರೀಮಿಂಗ್ ಮೂಲಕ ಬಿಡುಗಡೆಯಾಯಿತು.  ಡಿಸೆಂಬರ್ 20ರಂದು ಚಿತ್ರ ತೆರಗೆ ಅಪ್ಪಳಿಸಲಿದೆ ಎಂದು ಚಿತ್ರ ತಂಡ ಹೇಳಿದೆ. ಇನ್ನೂ ಈ ಚಿತ್ರ ಕರ್ನಾಟಕದಲ್ಲಿ ಕನ್ನಡದಲ್ಲೇ ಬಿಡುಗಡೆಯಾಗಲಿದೆ ಎನ್ನುವುದು ಇನ್ನೊಂದು ವಿಶೇಷವಾಗಿದೆ. ಕನ್ನಡಕ್ಕೆ ಖ್ಯಾತ ನಿರ್ದೇಶಕ ಗುರುದತ್ ಗಾಣಿಗ ಸಂಭಾಷಣೆ ಬರೆದಿದ್ದಾರೆ. ರಂಗಿತರಂಗ ಚಿತ್ರದ ಮೂಲಕ ಬೆಳಕಿಗೆ ಬಂದ ಅದ್ಭುತ ನಿರ್ದೇಶಕ ಅನೂಪ್ ಭಂಡಾರಿ ಸಾಹಿತ್ಯ ಬರೆದಿದ್ದಾರೆ.

ಟ್ರೈಲರ್ ಬಿಡುಗಡೆಯ ವೇಳೆ ಸಲ್ಮಾನ್ ಖಾನ್ ಕಿಚ್ಚ ಸುದೀಪ್ ಅವರನ್ನು ಹಾಡಿ ಹೊಗಳಿದ್ದಾರೆ. ಕಿಚ್ಚ ನನ್ನ ಸಹೋದರನಂತೆ, ಈಗ ನನಗೆ ಅವರು ತುಂಬಾ ಆತ್ಮೀಯರು. ಸ್ವಚ್ಛ ಮನಸ್ಸಿನ ಮನುಷ್ಯ ಅವರು. ಈ ಚಿತ್ರದಲ್ಲಿ ಕಿಚ್ಚ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!