Kotee Movie :’ ಕೋಟಿ ‘ ಬೆನ್ನು ತಟ್ಟಿದ ಪ್ರೇಕ್ಷಕರು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಂಧನದ ನಡುವೆಯೂ, ಪರಂ ನಿರ್ದೇಶನದ ಕೋಟಿ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕನ್ನಡದ ಪ್ರೇಕ್ಷಕರು ಕೋಟಿ ಚಿತ್ರವನ್ನು ಮೆಚ್ಚಿದ್ದಾರೆ. ಕುಟುಂಬ ಸಮೇತವಾಗಿ ಚಿತ್ರ ಮಂದಿರಕ್ಕೆ ಬಂದು ಚಿತ್ರವನ್ನು ವೀಕ್ಷಿಸುತ್ತಿದ್ದಾರೆ ಎಂದು ಕೋಟಿ ಚಿತ್ರದ ನಿರ್ದೇಶಕ ಪರಮ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ನಟ ರಾಕ್ಷಸ ಧನಂಜಯ ನಟಿಸಿರುವ ಕೋಟಿ ಚಿತ್ರ ಪ್ರೇಕ್ಷಕರಿಗೆ ಸದಭಿರುಚಿಯ ಅನುಭವವನ್ನು ನೀಡುತ್ತದೆ. ಚಿತ್ರದಲ್ಲಿ ಧನಂಜಯ ಜೊತೆಗೆ ಮೋಕ್ಷ ಕುಶಾಲ್, ರಂಗಾಯಣ ರಘು, ರಮೇಶ್ ಇಂದಿರಾ, ತಾರಾ ಇತರರು ನಟಿಸಿದ್ದಾರೆ.

ನಿರ್ದೇಶಕರು ಚಿತ್ರವನ್ನು ಸಸ್ಪೆನ್ಸ್, ಥ್ರಿಲ್ಲರ್ ಮೂಲಕ ಹೆಣೆಯುವ ಯತ್ನವನ್ನು ಮಾಡಿದ್ದಾರೆ. ಚಿತ್ರ ಮಧ್ಯಮ ವರ್ಗಕ್ಕೆ ಹೆಚ್ಚು ಕನೆಕ್ಟ್ ಆಗುತ್ತದೆ. ಹೀಗಾಗಿ ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ.

ಚಿತ್ರವನ್ನು ಜ್ಯೋತಿ ದೇಶಪಾಂಡೆ ಅವರು ನಿರ್ಮಾಣ ಮಾಡಿದ್ದಾರೆ. ವಾಸುಕಿ ವೈಭವ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ನೋಬಿಲ್ ಪೌಲ್ ಹಿನ್ನಲೆ ಸಂಗೀತ ಚಿತ್ರಕ್ಕಿದೆ.

ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನ ಆದ ಬಳಿಕ ಮಾಧ್ಯಮಗಳು ಹೊಸ ಚಿತ್ರಗಳಿಗೆ ಪ್ರಚಾರವನ್ನು ನೀಡುವುದು ಕಡಿಮೆಯಾಗಿದೆ. ಇಂಥ ಪ್ರತಿಕೂಲ ಪರಿಸ್ಥಿತಿಯಲ್ಲಿ ಕೋಟಿ ಚಿತ್ರವನ್ನು ಗೆಲ್ಲಿಸುವ ಮೂಲಕ ಪ್ರೇಕ್ಷಕರು ಒಳ್ಳೆಯ ಚಿತ್ರಕ್ಕೆ ಮಣೆ ಹಾಕಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!